ನವದೆಹಲಿ: ಲೋಕಸಭೆಯಲ್ಲಿ ನಿನ್ನೆ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಾಗ ವಿಪಕ್ಷ ನಾಯಕ ರಾಹುಲ್ ಗಾಂಧಿ ಒಟ್ಟು 34 ಬಾರಿ ಚೀನಾ ಜಪ ಮಾಡಿದ್ದಾರೆ.
ನಿನ್ನೆಯ ಭಾಷಣದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು. ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಿಂದ ದೇಶಕ್ಕೆ ನಷ್ಟವಾಗಿದೆಯೇ ಹೊರತು ಯಾವುದೇ ಲಾಭವಾಗಿಲ್ಲ ಎಂದಿದ್ದಾರೆ.
ಜೊತೆಗೆ ಚೀನಾ ನಮ್ಮ ದೇಶದ ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಹಾಗಿದ್ದರೂ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಆದರೆ ಭಾರತದ ಸೇನೆ ಇದನ್ನು ಸ್ಪಷ್ಟಪಡಿಸುತ್ತಿದೆ ಎಂದು ರಾಹುಲ್ ಆರೋಪ ಮಾಡಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಚೀನಾದ ಉದಾಹರಣೆ, ಚೀನಾ ಉತ್ಪನ್ನಗಳ ಬಗ್ಗೆ ಉದಾಹರಣೆ ನೀಡುತ್ತಲೇ ರಾಹುಲ್ ವಾಗ್ದಾಳಿ ನಡೆಸಿದ್ದರು. ಒಟ್ಟು 34 ಬಾರಿ ಅವರು ತಮ್ಮ ಭಾಷಣದಲ್ಲಿ ಚೀನಾವನ್ನು ಉಲ್ಲೇಖಿಸಿದ್ದಾರೆ. ಇದನ್ನು ನೆಟ್ಟಿಗರು ಗಮನಿಸಿದ್ದು, ಅಂತೂ ರಾಹುಲ್ ಪರೋಕ್ಷವಾಗಿ ಸಂಸತ್ ನಲ್ಲೂ ಚೀನಾವನ್ನು ವೈಭವೀಕರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.