Select Your Language

Notifications

webdunia
webdunia
webdunia
webdunia

HMPV ವೈರಸ್ ತಗುಲಿದ 8 ತಿಂಗಳ ಮಗುವಿನ ಕತೆ ಏನಾಗಿದೆ ನೋಡಿ

HMPV Virus

Krishnaveni K

ಬೆಂಗಳೂರು , ಮಂಗಳವಾರ, 7 ಜನವರಿ 2025 (11:06 IST)
ಬೆಂಗಳೂರು: HMPV ವೈರಸ್ ತಗುಲಿದ ಬೆಂಗಳೂರಿನ 8 ತಿಂಗಳ ಮಗುವಿನ ಕತೆ ಏನಾಗಿದೆ ನೋಡಿ. ನಿನ್ನೆ ಭಾರತದಲ್ಲಿ ಪತ್ತೆಯಾದ ಮೊದಲ HMPV ವೈರಸ್ ಸೋಂಕಿತ ಮಗು ಇದಾಗಿತ್ತು.

ಚೀನಾದಲ್ಲಿ ವ್ಯಾಪಕವಾಗಿದ್ದ HMPV ವೈರಸ್ ಮೊದಲ ಕೇಸ್ ನಿನ್ನೆ  ಬೆಂಗಳೂರಿನಲ್ಲಿ ದೃಢಪಟ್ಟಿತ್ತು. ಬೆಂಗಳೂರಿನ 8 ತಿಂಗಳ ಮಗುವಿಗೆ HMPV ವೈರಸ್ ಖಚಿತವಾಗಿತ್ತು. ಮಗು ಜ್ವರದಿಂದ ಬಳಲುತ್ತಿತ್ತು ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ 8 ತಿಂಗಳ ಮಗು ಚೇತರಿಸಿಕೊಂಡಿದೆ. ಇಂದು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಈಗಾಗಲೇ ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಇದೀಗ ಮಗು ಚೇತರಿಸಿಕೊಂಡಿರುವ ಹಿನ್ನಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ. ನಿನ್ನೆಯೇ ಆರೋಗ್ಯ ಸುಧಾರಿಸಿದ್ದರೂ ಒಂದು ದಿನ ಪರಿಸ್ಥಿತಿ ಅವಲೋಕಿಸಲು ಆಸ್ಪತ್ರೆಯಲ್ಲಿರಿಸಲಾಗಿತ್ತು. HMPV ವೈರಸ್ ಸೋಂಕಿತ ಇನ್ನೊಂದು 3 ತಿಂಗಳ ಮಗು ಚೇತರಿಸಿಕೊಂಡಿದ್ದು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇಬ್ಬರೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಖಚಿತವಾಗಿದೆ.

ಇನ್ನು, ನಿನ್ನೆ ಸಂಜೆ ಚೆನ್ನೈನಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇಂದು ಅಹಮ್ಮದಾಬಾದ್ ನಲ್ಲಿ ಇಬ್ಬರು ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 7 ಕ್ಕೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳದಲ್ಲಿ ಕ್ಯೂ ಕಾಂಪ್ಲೆಕ್ಸ್: ರಾಜ್ಯದಲ್ಲೇ ಮೊದಲ ಪ್ರಯೋಗ ಮಾಡಿದ ವೀರೇಂದ್ರ ಹೆಗ್ಗಡೆ