Select Your Language

Notifications

webdunia
webdunia
webdunia
webdunia

ಹಸಿವಾಗುತ್ತಿದೆ ಅಮ್ಮಾ ಎಂದಿದ್ದ ಪ್ರಿಯಾಂಕ ರೆಡ್ಡಿ!

ಹಸಿವಾಗುತ್ತಿದೆ ಅಮ್ಮಾ ಎಂದಿದ್ದ ಪ್ರಿಯಾಂಕ ರೆಡ್ಡಿ!
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (10:08 IST)
ಬೆಂಗಳೂರು: ಇಡೀ ರಾಷ್ಟ್ರವೇ ಬೆಚ್ಚಿಬಿದ್ದ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ಕೊನೆಯ ಕ್ಷಣದಲ್ಲಿ ತಮ್ಮ ಮಗಳು ಮಾತಾಡಿದ್ದು ಏನೆಂದು ಪ್ರಿಯಾಂಕ ತಾಯಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.


ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ಮನೆಗೆ ಹೊರಡುವ ಮೊದಲು ಕರೆ ಮಾಡಿದ್ದ ಮಗಳು ‘ಅಮ್ಮಾ ತುಂಬಾ ಹಸಿವಾಗುತ್ತಿದೆ. ಹಣ್ಣು ಕತ್ತರಿಸಿಡು’ ಎಂದಿದ್ದಳು ಎನ್ನುತ್ತಾ ಪ್ರಿಯಾಂಕಾ ತಾಯಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.

ಅದಲ್ಲದೆ, ತಂಗಿಗೆ ಕರೆ ಮಾಡುವ ಬದಲು ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡಿದ್ದರೆ ಆಕೆ ಬದುಕುತ್ತಿದ್ದಳು ಎಂದಿದ್ದ ಸಲಹೆಗೆ ಕಿಡಿ ಕಾರಿರುವ ಅವರು ‘ಆ ಸಂಖ್ಯೆಗೆ ಕರೆ ಮಾಡಿದರೆ ಹಲವು ಹಂತಗಳ ಪಾಲನೆ ಮಾಡಬೇಕಾಗುತ್ತದೆ. ಆ ಗಾಬರಿಯಲ್ಲಿ ಅದೆಲ್ಲಾ ಸಾಧ‍್ಯವಿತ್ತೇ?’ ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೂಮಪಾನದಿಂದ ನೌಕರರನ್ನು ಕಾಪಾಡಲು ಭರ್ಜರಿ ಆಫರ್ ನೀಡಿದ ಜಪಾನ್ ಕಂಪೆನಿ