Select Your Language

Notifications

webdunia
webdunia
webdunia
webdunia

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಹೋದರನ ಗುಣಗಾನ ಮಾಡಿದ ಪ್ರಿಯಾಂಕ ಗಾಂಧಿ

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಹೋದರನ ಗುಣಗಾನ ಮಾಡಿದ ಪ್ರಿಯಾಂಕ ಗಾಂಧಿ
ನವದೆಹಲಿ , ಗುರುವಾರ, 4 ಜುಲೈ 2019 (11:24 IST)
ನವದೆಹಲಿ : ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಹೋದರ ರಾಹುಲ್ ಗಾಂಧಿಯ ನಿರ್ಧಾರದ ಬಗ್ಗೆ ಪ್ರಿಯಾಂಕ ಗಾಂಧಿ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




ರಾಹುಲ್ ಗಾಂಧಿಯವರು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿ, ರಾಜೀನಾಮೆ ಪತ್ರವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. ಬಹಿರಂಗವಾಗಿ ರಾಜೀನಾಮೆ ಪತ್ರವನ್ನು ಪ್ರಕಟಿಸಿದ್ದ ಸಹೋದರ ರಾಹುಲ್ ಗಾಂಧಿಯ ಧೈರ್ಯವನ್ನು  ಪ್ರಿಯಾಂಕಾ ಕೊಂಡಾಡಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, ಕೆಲವರಿಗಷ್ಟೇ ಧೈರ್ಯ ಇದೆ. ಆ ಧೈರ್ಯ ನಿನಗೆ ಇದೆ. ನಿನ್ನ ಈ ದಿಟ್ಟ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಬರೆದುಕೊಂಡು ರಾಹುಲ್ ಗಾಂಧಿಯವರಿಗೆ ಟ್ಯಾಗ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ ಸಚಿವ ವೆಂಕಟರಮಣಪ್ಪ. ಕಾರಣವೇನು ಗೊತ್ತಾ?