Publish Date: Wed, 22 Apr 2026 (16:31 IST)
Updated Date: Wed, 22 Apr 2026 (16:34 IST)
ಬೆಂಗಳೂರು: ಪ್ರಧಾನಿ ಮೋದಿ ಭಯೋತ್ಪಾದಕ ಎಂದು ಕರೆದಿದ್ದ ಮಲ್ಲಿಕಾರ್ಜುನ ಖರ್ಗೆ ಪರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ಕೂಡಾ ಒಮ್ಮೆ ಮೋದಿ ಭಯೋತ್ಪಾದಕ ಎಂದರಲಿಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಕರ್ನಾಟಕ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ದೇಶದ ಪ್ರಧಾನ ಮಂತ್ರಿಯನ್ನು ಭಯೋತ್ಪಾದಕ ಎಂದು ಕರೆದ ಖರ್ಗೆ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದರ ಬಗ್ಗೆ ಮಾಧ್ಯಮಗಳಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಪ್ರತಿಭಟನೆ ಮಾಡುವುದಿದ್ದರೆ ಮಾಡಲಿ. ಮಲ್ಲಿಕಾರ್ಜುನ ಖರ್ಗೆಯವರು ಈಗಾಗಲೇ ನಾನು ಮೋದಿ ವಿಪಕ್ಷಗಳಲ್ಲಿ ಭಯ ಹುಟ್ಟಿಸುತ್ತಾರೆ ಎಂಬರ್ಥದಲ್ಲಿ ಹೇಳಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರತಿಭಟನೆ ಮಾಡುವ ಬಿಜೆಪಿಯವರು ಇದಕ್ಕೂ ಉತ್ತರ ಕೊಡಬೇಕು. ಪ್ರತಿನಿತ್ಯ ಒಬ್ಬ ಅಲ್ಲಾ ಇನ್ನೊಬ್ಬ ಬಿಜೆಪಿ ನಾಯಕ ಕಾಂಗ್ರೆಸ್ ನಾಯಕರನ್ನು ದೇಶ ವಿರೋಧಿ, ಅರ್ಬನ್ ನಕ್ಸಲ್ ಎಂದೆಲ್ಲಾ ಕರೆಯುತ್ತಿರುತ್ತಾರೆ. ಇದು ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅಷ್ಟಕ್ಕೂ ಈ ಹಿಂದೆ ಬಿಜೆಪಿಯ ಈಗಿನ ಮಿತ್ರ ಚಂದ್ರಬಾಬು ನಾಯ್ಡು ಅವರೇ ಮೋದಿ ಭಯೋತ್ಪಾದಕ ಎಂದಿದ್ದರು. ಹಾಗಿದ್ದರೆ ಮೊದಲು ತಮ್ಮ ಮಿತ್ರ ಪಕ್ಷದ ನಾಯಕನಿಂದ ಬಿಜೆಪಿಯವರು ಸ್ಪಷ್ಟನೆ ಪಡೆಯಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ