Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮತ್ತಷ್ಟೂ ಬಂದೋಬಸ್ತ್!

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮತ್ತಷ್ಟೂ ಬಂದೋಬಸ್ತ್!
ನವದೆಹಲಿ , ಬುಧವಾರ, 3 ಜನವರಿ 2018 (11:46 IST)
ನವದೆಹಲಿ: ಈಗಾಗಲೇ ಸಾಕಷ್ಟು ಬಿಗಿಭದ್ರತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆಮತ್ತಷ್ಟು ಭದ್ರತೆ ಒದಗಿಸಲು ಎಸ್ ಪಿಜಿ ನಿರ್ಧಾರ ಮಾಡಿದೆ. ಪ್ರಧಾನಿ ಅವರ ನಿವಾಸದ ಸುತ್ತ 2.8. ಕಿ.ಮೀ. ಉದ್ದದ ‘ಸೆನ್ಸರ್ ಬೇಲಿ’ ಅಳವಡಿಕೆ ಮಾಡಲು ಪ್ರಧಾನಮಂತ್ರಿಗಳ ಭದ್ರತಾ ಹೊಣೆ ಹೊತ್ತುಕೊಂಡಿರುವ ವಿಶೇಷ ರಕ್ಷಣಾ ಗುಂಪು (ಎಸ್ ಪಿಜಿ) ನಿರ್ಧರಿಸಿದೆ.


ಪ್ರಧಾನಿ ನಿವಾಸದೊಳಕ್ಕೆ ಅಕ್ರಮವಾಗಿ ಯಾರೇ ನುಸುಳಲು ಪ್ರಯತ್ನಿಸಿದರೆ ತಕ್ಷಣವೇ ಅಲಾರಾಂ ಹೊಡೆದುಕೊಳ್ಳುವ ‘ಪೆರಿಮೀಟರ್ ಇನ್‌ಟ್ರೂಷನ್ ಡಿಟೆಕ್ಷನ್ ಸಿಸ್ಟಂ’ (ಪಿಡ್ಸ್) ಎಂಬ ವ್ಯವಸ್ಥೆ ಇದಾಗಿದೆ. ಬಿಡಿಭಾಗಗಳೂ ಸೇರಿದಂತೆ ಎಲ್ಲ ಉಪಕರಣ ಸ್ವದೇಶದಲ್ಲೇ ನಿರ್ಮಾಣವಾಗಿರ ಬೇಕು ಎಂಬ ಷರತ್ತನ್ನು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.


ಪ್ರಧಾನಿ ಮೋದಿ ಅವರು ಲೋಕಕಲ್ಯಾಣ ಮಾರ್ಗದಲ್ಲಿನ ನಂ.7ನೇ ಸಂಖ್ಯೆಯ ನಿವಾಸದಲ್ಲಿ ವಾಸಿಸುತ್ತಾರೆ. ಟೆಂಡರ್ ಸಿಕ್ಕ ಮೂರು ತಿಂಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಮಾಡಿಕೊಡಬೇಕು. ಜತೆಗೆ 10 ಎಸ್‌ಪಿಜಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಏನಾದರೂ ಸಮಸ್ಯೆ ಕಾಣಿಸಿದರೆ ನಿರ್ವಹಣೆಗೆ ಸದಾ ಸಿದ್ಧವಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ಆಚರಣೆಯಲ್ಲಿ ರಾಹುಲ್ ಗಾಂಧಿ ಮಸ್ತಿ ಹೇಗಿತ್ತು ಗೊತ್ತಾ? (ಫೋಟೋ ಗ್ಯಾಲರಿ)