Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿಗೆ ಇತಿಹಾಸ ಜ್ಞಾನದ ಕೊರತೆ

ಪ್ರಧಾನಿ ನರೇಂದ್ರ ಮೋದಿಗೆ ಇತಿಹಾಸ ಜ್ಞಾನದ ಕೊರತೆ
delhi , ಮಂಗಳವಾರ, 7 ನವೆಂಬರ್ 2023 (11:04 IST)
ಪ್ರಧಾನಿ ಮೋದಿ ದೇಶದಲ್ಲಿ ಇತಿಹಾಸ ನಿರ್ಮಿಸುತ್ತಿದ್ದೇನೆ ಎಂದು ಭಾವಿಸಿದ್ದಾರೆ. ಆದರೆ, ಸತ್ಯಕ್ಕೆ, ಇತಿಹಾಸಕ್ಕೆ ದೂರವಾದಂತಹ ವಿಷಯಗಳನ್ನು ಪ್ರಸ್ತಾಪಿಸುತ್ತಾ ಹೊಸ ಇತಿಹಾಸವನ್ನೇ ನಿರ್ಮಿಸುತ್ತಿದ್ದಾರೆ ಎಂದು  ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿಗೆ ಇತಿಹಾಸ ಜ್ಞಾನದ ಕೊರತೆಯಿರುವುದರಿಂದ ಹಿರಿಯರಿಂದ ಇತಿಹಾಸದ ಪಾಠ ಕಲಿಯಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
 
ಗುಜರಾತ್‌ನ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರನ್ನು ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರೊಂದಿಗೆ ಹೋಲಿಸಿ, ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯತೆಯಿಂದಾಗಿ ಅವರು ವಿದೇಶದಲ್ಲಿ ಸಾವನ್ನಪ್ಪಿದ್ದರು ಎಂದು ತಪ್ಪು ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿತ್ತು.
 
ಜವಾಹರಲಾಲ್ ನೆಹರು ರಾಜಕೀಯಕ್ಕೆ ಬರುವ ಮುನ್ನ ಪೇಂಟ್ ಹಚ್ಚುವ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿ ಜವಾಹರಲಾಲ್ ನೆಹರು ಮತ್ತು ಅರುಣ್ ನೆಹರು ಯಾರು ಎಂದು ಮೋದಿ ಕೇಳಿದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
 
ಕಾಂಗ್ರೆಸ್ ಟೀಕೆಗಳಿಂದ ಕಂಗಾಲಾದ ಬಿಜೆಪಿ ಅಕಸ್ಮಿಕವಾಗಿ ಇಂತಹ ತಪ್ಪಾಗಿದೆ. ಇಂತಹ ತಪ್ಪುಗಳು ಎಲ್ಲರಿಂದ ಆಗುತ್ತವೆ. ಇಂತಹ ವಿಷಯವನ್ನು ಬೃಹದಾಕಾರವಾಗಿ ರೂಪಿಸುತ್ತಿರುವುದು ಮೂರ್ಖತನದ ಪರಮಾವದಿ ಎಂದು ಬಿಜೆಪಿ ವಕ್ತಾರ ಹೇಳಿದ್ದಾರೆ.
 
ಮತ್ತೊಂದು ಕಡೆ ಮೋದಿ ಮಾತನಾಡಿ, ಚೀನಾ ಸರಕಾರ ತನ್ನ ಜಿಡಿಪಿ ಉತ್ಪನ್ನದಲ್ಲಿ ಶೇ.20 ರಷ್ಟನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದರು. ಆದರೆ, ಇದೀಗ ಚೀನಾ ಶಿಕ್ಷಣಕ್ಕಾಗಿ ಮಾಡುತ್ತಿರುವ ವೆಚ್ಚ ಕೇವಲ ಶೇ.3 ರಷ್ಟಾಗಿದೆ ಎಂದು  ಹೇಳಿ ನಗೆಪಾಟೀಲಿಗಿಡಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ: ಪ್ರಿಯಕರನ ನೆರವಿನಿಂದ ಪತಿಯ ಹತ್ಯೆಗೈದ ಕಾಮುಕ ಪತ್ನಿ