Select Your Language

Notifications

webdunia
webdunia
webdunia
webdunia

ಪ್ರತಿಭಾಶಾಲಿ ಯುವಶಕ್ತಿಯನ್ನು ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ

ಪ್ರತಿಭಾಶಾಲಿ ಯುವಶಕ್ತಿಯನ್ನು ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ
delhi , ಶನಿವಾರ, 4 ನವೆಂಬರ್ 2023 (11:45 IST)
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗವಹಿಸುವ ಎಲ್ಲರಿಗೂ ನಮ್ಮ ಯುವಜನರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಆಹ್ವಾನಿಸಿದರು. ನಿಮ್ಮ ಬೆಳವಣಿಗೆ ನಮ್ಮ ಬೆಳವಣಿಗೆಯೊಂದಿಗೆ ತಳಕು ಹಾಕಿಕೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
 
 ಇನ್ನಷ್ಟು ಸುಧಾರಣೆಗಳ ಭರವಸೆ ನೀಡಿ ಹೂಡಿಕೆದಾರರಿಗೆ ವಿಶೇಷವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಿದರು. ದೇಶದ ಅತ್ಯಂತ ಪ್ರತಿಭಾಶಾಲಿ ಯುವಶಕ್ತಿಯನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
 
ಸ್ಪರ್ಧಾತ್ಮಕ ಜಗತ್ತಿನ ಈ ಯುಗದಲ್ಲಿ, ಭಾರತದಲ್ಲಿ ಪ್ರತಿಭಾಶಾಲಿ ಯುವಜನರು ನಿಮಗೆ ಸಿಗುತ್ತಾರೆ. ಅವರು ಸ್ಪರ್ಧಾತ್ಮಕ ಉತ್ಪನ್ನಗಳ ತಯಾರಿಕೆಗೆ ನೆರವಾಗುತ್ತಾರೆ ಎಂದು ಕಾರ್ಪೋರೇಟ್‌ಗಳಿಗೆ ಅವರು ಭರವಸೆ ನೀಡಿದರು. ಪ್ರಧಾನಮಂತ್ರಿ ಅಮೆರಿಕದ ಎಂಜಿನಿಯರಿಂಗ್ ದೈತ್ಯ ಜಿಇ ಸ್ಥಾಪಿಸಿದ ಬಹುಮಾದರಿ ಉತ್ಪಾದನೆ ಸೌಲಭ್ಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯತಮೆಯ ಅಶ್ಲೀಲ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್: ಆರೋಪಿ ಬಂಧನ