Publish Date: Sat, 25 Sep 2021 (14:43 IST)
Updated Date: Sat, 25 Sep 2021 (13:13 IST)
ನವದೆಹಲಿ,ಸೆ.25 : ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ 545 ಪುರುಷರು ಹಾಗೂ 216 ಮಳೆಯರು ಉತ್ತೀರ್ಣರಾಗಿದ್ದು, ನಿಮ್ಮ ಮುಂದಿನ ಸಾರ್ವಜನಿಕ ಸೇವೆ ಅತ್ಯುತ್ತಮವಾಗಿರಲಿ ಎಂದು ಮೋದಿ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಐಎಎಸ್ ಅಕಾರಿಗಳಾಗಿ ನೇಮಕಗೊಂಡಿರುವ ನಿಮ್ಮಿಂದ ದೇಶದ ಆಡಳಿತ ವ್ಯವಸ್ಥೆ ಮತ್ತಷ್ಟು ಸುಧಾರಣೆ ಕಾಣಲಿ ಎಂದು ಅವರು ಆಶಿಸಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿರುವ ನಿಮ್ಮಲ್ಲಿ ಆಗಾಧ ಪ್ರತಿಭೆ ಇದೆ. ನಿಮ್ಮ ಈ ಪ್ರತಿಭೆ ದೇಶಕ್ಕೆ ಮಾದರಿಯಾಗಲಿ ಎಂದು ಅವರು ಶುಭ ಕೋರಿದ್ದಾರೆ.