ನವದೆಹಲಿ : ಮುನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಬುಧವಾರ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ರೀತಿಯಲ್ಲಿ ನಾರಿಶಕ್ತಿ ಸಾಕ್ಷಾತ್ಕಾರದ ಪರ್ವ ಎಂದು ಹೇಳಿದ್ದಾರೆ. ಜೊತೆಗೆ, ಇಂದಿನ ಬಜೆಟ್ ಅಧಿವೇಶನವೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದಿಂದ ಪ್ರಾರಂಭವಾಗಲಿದೆ. ನಾಳೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ ಎಂದು ಪ್ರಧಾನಿ ಮೋದಿ ನುಡಿದರು.
ನೂತನ ಸಂಸತ್ ಭವನದ ಮೊದಲ ಅಧಿವೇಶನದ ಅಂತ್ಯದಲ್ಲಿ ಅತಿ ಮಹತ್ವದ ನಿರ್ಣಯವೊಂದನ್ನು ಕೈಗೊಳ್ಳಲಾಯಿತು. ಅದು ನಾರಿ ಶಕ್ತಿ ವಂದನ ಕಾಯಿದೆ. ಜ .26 ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇಡೀ ದೇಶವೇ ನಮ್ಮ ಮಹಿಳೆಯರು ಕರ್ತವ್ಯದಲ್ಲಿ ತೋರುವ ಸ್ಥೈರ್ಯ, ಸಾಮರ್ಥ್ಯ ಮತ್ತು ಛಲಗಾರಿಕೆಗೆ ಸಾಕ್ಷಯಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ