ನವದೆಹಲಿ: ಅಕ್ರಮ ಗಣಿಗಾರಿಕೆ ವಿರೋಧಿಸುತ್ತಿದ್ದ ಅರ್ಚಕರೊಬ್ಬರು ಅನುಮಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆದರೆ ಪೊಲೀಸರು ಮೃತದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಇದು ಸಹಜ ಸಾವೆಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಇದಾದ ಬಳಿಕವಷ್ಟೇ ನಿಜಾಂಶ ತಿಳಿಯಲಿದೆ. ಅರ್ಚಕರು ತನ್ನ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದ ಸಂಘಟನೆಯೊಂದರ ಸದಸ್ಯರಾಗಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಸಾವಿನ ಹಿಂದೆ ಗಣಿ ಮಾಫಿಯಾ ಕೈವಾಡವಿರಬಹುದೇ ಎಂದು ಶಂಕಿಸಲಾಗಿದೆ.