Select Your Language

Notifications

webdunia
webdunia
webdunia
webdunia

ಗರ್ಭಿಣಿ ಪತ್ನಿಯನ್ನೇ ವೈದ್ಯರಿಗೇ ಸುಪಾರಿ ಕೊಟ್ಟ ಪತಿ!

ಗರ್ಭಿಣಿ ಪತ್ನಿಯನ್ನೇ ವೈದ್ಯರಿಗೇ ಸುಪಾರಿ ಕೊಟ್ಟ ಪತಿ!
ಜೈಪುರ , ಶುಕ್ರವಾರ, 21 ಜನವರಿ 2022 (06:53 IST)
ಜೈಪುರ : ತನ್ನ ಪತ್ನಿಯನ್ನು ಕೊಲೆ ಮಾಡಲು ವೈದ್ಯರನ್ನು ನೇಮಿಸಿಕೊಳ್ಳಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ರಾಜಸ್ಥಾನ್ನಲ್ಲಿ ನಡೆದಿದೆ.

ಆರೋಪಿಯು ಪೆಡವಾ ಪ್ರದೇಶದ ಮಂಗಲ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಜಲವಾರ್ ನಗರ ಪೊಲೀಸರು ತಿಳಿಸಿದ್ದಾರೆ.

ನಗರದ ಎಸ್ಆರ್ಜಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಅಖಿಲೇಶ್ ಮೀನಾ ಅವರ ದೂರಿನ ಮೇರೆಗೆ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಂಗ್ ಅವರು ತಮ್ಮ ನಿವಾಸಕ್ಕೆ ಬಂದು, ಪತ್ನಿಯನ್ನು ಕೊಲ್ಲಲು ವಿನಂತಿಸಿದ್ದರು.

ತನ್ನ ಗರ್ಭಿಣಿ ಪತ್ನಿಯ ಚಿಕಿತ್ಸೆಗಾಗಿ ವ್ಯಕ್ತಿ ನಾಲ್ಕೈದು ದಿನಗಳಿಂದ ನನ್ನನ್ನು ಸಂಪರ್ಕಿಸಿದ್ದ. ಚಿಕಿತ್ಸೆಯ ಉದ್ದೇಶದಿಂದ ಬಂದಿದ್ದ ಆತ ನಂತರ, ತನ್ನ ಪತ್ನಿಯನ್ನು ಕೊಲ್ಲಬೇಕು ಎಂದು ಮನವಿ ಮಾಡಿದ್ದ. ಈತ ಮನೋರೋಗಿ ಇರಬೇಕು ಎಂದು ಭಾವಿಸಿ ಬುದ್ದಿ ಹೇಳಿ ಕಳುಹಿಸಿದ್ದೆ ಎಂದು ವೈದ್ಯರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಓಮಿಕ್ರಾನ್ ವೇರಿಯಂಟ್ ಬಂದರೆ ಒಳ್ಳೆಯದೇ: ಅಧ್ಯಯನ!