Select Your Language

Notifications

webdunia
webdunia
webdunia
webdunia

ನಿತೀಶ್ ಕುಮಾರ್ಗೆ ಬೆಂಬಲ ನೀಡಿದ ಪ್ರಶಾಂತ್ ಕಿಶೋರ್

webdunia
ಪಾಟ್ನಾ , ಗುರುವಾರ, 18 ಆಗಸ್ಟ್ 2022 (15:38 IST)
ಪಾಟ್ನಾ : ಬಿಹಾರದ ಮಹಾ ಘಟಬಂಧನ್ ಸರ್ಕಾರವು ಮುಂದಿನ ಒಂದೆರಡು ವರ್ಷಗಳಲ್ಲೇ 5 ರಿಂದ 10 ಲಕ್ಷ ಉದ್ಯೋಗ ಕಲ್ಪಿಸಿದರೆ ನಾನು ನನ್ನ `ಜನ್ ಸೂರಜ್’ ಅಭಿಯಾನವನ್ನು ಹಿಂತೆಗೆದುಕೊಳ್ಳುತ್ತೇನೆ.
 
ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ಗೆ ಬೆಂಬಲ ನೀಡುತ್ತೇನೆ ಎಂದು ರಾಯಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಈ ಕುರಿತು ಬಿಹಾರದ ಸಮಸ್ತಿಪುರದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಉಪಮುಖ್ಯಮಂತ್ರಿಯಾಗಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಇತ್ತೀಚೆಗೆ ತಮ್ಮ ಪಕ್ಷವು ಹೊಸ ಸರ್ಕಾರದ ಭಾಗವಾಗಿದೆ.

ಅದರಿಂದ 2020ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದೆ ಎಂದು ಹೇಳಿದ್ದರು. ಒಂದು ವೇಳೆ ಮುಂದಿನ ಒಂದೆರಡು ವರ್ಷಗಳಲ್ಲಿ 5 ರಿಂದ 10 ಲಕ್ಷ ಉದ್ಯೋಗ ಕಲ್ಪಿಸಿದರೆ ನಾನು `ಜನ್ ಸೂರಜ್’ ಅಭಿಯಾನ ಹಿಂತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ ರಸ್ತೆ ಬಂದ್..!