Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಿಂದ 2024ರ ಲೋಕಸಭಾ ಚುನಾವಣೆ ಕಾರ್ಯತಂತ್ರ ಘೋಷಣೆ

Congress  sonia gandhi prashant kishore  ಪ್ರಶಾಂತ್ ಕಿಶೋರ್ ಸೋನಿಯಾ ಗಾಂಧಿ ಕಾಂಗ್ರೆಸ್
bengaluru , ಸೋಮವಾರ, 25 ಏಪ್ರಿಲ್ 2022 (17:12 IST)

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೀಡಿದ ತಂತ್ರಗಾರಿಕೆ ಆಧರಿಸಿ ಕಾಂಗ್ರೆಸ್ ತನ್ನ 2024ರ ಲೋಕಸಭಾ ಚುನಾವಣೆಗೆ ಚಾಲನೆ ನೀಡಿದ್ದು, 8 ಸದಸ್ಯರ ಕಾರ್ಯಪಡೆ ರಚಿಸಿದೆ.

ಪ್ರಶಾಂತ್ ಕಿಶೋರ್ ನೀಡಿದ ವರದಿ ಆಧರಿಸಿ 8 ಸದಸ್ಯರ ಮಾರ್ಗದರ್ಶಿ ತಂಡ ಯೋಜನೆ ರೂಪಿಸಿದ್ದು, ಇವರ ಶಿಫಾರಸು ಆಧರಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಕಾರ್ಯತಂತ್ರ ಜಾರಿಗೆ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಈ ವಿಷಯ ಪ್ರಕಟಿಸಿದ್ದು, ಮೇ 13ರಿಂದ 3 ದಿನಗಳ ಕಾಲ ಉದಯಪುರದಲ್ಲಿ ನಯಾ ಸಂಕಲ್ಪ್ ಹೆಸರಿನಲ್ಲಿ ಸಮಾವೇಶ ನಡೆಯಲಿದ್ದು, ಪ್ರತಿ ರಾಜ್ಯದಿಂದ 400 ಕಾಂಗ್ರೆಸ್ ಸದಸ್ಯರು ಹಾಗೂ ಸದಸ್ಯೆಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ತನ್ನ ನೂತನ ಕಾರ್ಯತಂತ್ರ ಜಾರಿಗೊಳಿಸಲು ನಿರ್ಧರಿಸಿದ್ದರೂ ಪ್ರಶಾಂತ್ ಕಿಶೋರ್ ಯಾವಾಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ನಲ್ಲಿ 1439 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ