Publish Date: Mon, 01 Jun 2020 (09:19 IST)
Updated Date: Mon, 01 Jun 2020 (09:22 IST)
ನವದೆಹಲಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಪ್ರಧಾನಿ ಮೋದಿ ನಡುವೆ ಉತ್ತಮ ಬಾಂಧವ್ಯವಿದೆ. ಇದೀಗ ಆಸೀಸ್ ಪ್ರಧಾನಿ, ಭಾರತೀಯ ಪ್ರಧಾನಿಗೆ ಸಮೋಸಾ ಆಫರ್ ಮಾಡಿದ್ದಾರೆ!
ಭಾರತೀಯ ತಿನಿಸು ಸಮೋಸಾ ಮತ್ತು ಮಾವಿನ ಕಾಯಿ ಚಟ್ನಿ ಫೋಟೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ ಆಸ್ಟ್ರೇಲಿಯಾ ಪ್ರಧಾನಿ, ಭಾರತೀಯ ಪ್ರಧಾನಿ ಮೋದಿ ಜತೆಗೆ ಶೇರ್ ಮಾಡಿಕೊಂಡು ಸೇವಿಸಲು ಬಯಸುವುದಾಗಿ ಬರೆದುಕೊಂಡಿದ್ದಾರೆ.
ಸ್ಕಾಟ್ ಮಾರಿಸನ್ ಆಫರ್ ಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ ‘ನಾವು ಇಂಡಿಯನ್ ಓಷನ್ ಜತೆಗೆ ಬೆಸೆದಿದ್ದೇವೆ, ಇಂಡಿಯನ್ ಸಮೋಸಾ ಜತೆಗೆ ಒಗ್ಗಟ್ಟಾಗಿದ್ದೇವೆ. ನೋಡಿದರೆ ತುಂಬಾ ರುಚಿಯಾಗಿದೆ ಅನಿಸುತ್ತದೆ ಪಿಎಂ ಸ್ಕಾಟ್ ಮ್ಯಾರಿಸನ್. ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆದ್ದ ಬಳಿಕ ನಾವು ಜತೆಯಾಗಿ ಕುಳಿತು ಇದನ್ನು ಆಸ್ವಾದಿಸೋಣ’ ಎಂದು ಪ್ರತಿಕ್ರಿಯಿಸಿದ್ದಾರೆ.