Select Your Language

Notifications

webdunia
webdunia
webdunia
webdunia

PM Modi: ಆದಂ ಪುರ ವಾಯುನೆಲೆಗೆ ಮೋದಿ ಸರ್ಪ್ರೈಸ್ ಭೇಟಿ, ಸೆಲ್ಫೀಗೆ ಪೋಸ್

PM Modi

Krishnaveni K

ನವದೆಹಲಿ , ಮಂಗಳವಾರ, 13 ಮೇ 2025 (12:59 IST)
Photo Credit: X
ನವದೆಹಲಿ: ಪಾಕಿಸ್ತಾನದ ಜೊತೆ ಸಂಘರ್ಷದ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ಆದಂಪುರ ವಾಯುನೆಲೆಗೆ ಭೇಟಿ ಕೊಟ್ಟು ಸೈನಿಕರೊಂದಿಗೆ ಸೆಲ್ಫೀಗೆ ಪೋಸ್ ಕೊಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣವಿತ್ತು. ಭಾರತೀಯ ವಾಯುಪಡೆ ಆಪರೇಷನ್ ಸಿಂಧೂರ್ ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಯುದ್ಧ ವಿಮಾನಗಳು ಉಗ್ರರ ಅಡಗುದಾಣಗಳನ್ನು ಉಡೀಸ್ ಮಾಡಿದ್ದವು.

ಇದೀಗ ಉಭಯ ದೇಶಗಳ ನಡುವೆ ಕದನವಿರಾಮ ಘೋಷಣೆಯಾಗಿದ್ದು ಪರಿಸ್ಥಿತಿ ಶಾಂತವಾಗುತ್ತಿದೆ. ನಿನ್ನೆ ರಾತ್ರಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದು ಮುಂದೆ ಪಾಕಿಸ್ತಾನದ ನಡೆ ನೋಡಿಕೊಂಡು ನಮ್ಮ ಪ್ರತ್ಯುತ್ತರವಿರಲಿದೆ ಎಂದಿದ್ದರು.

ಇಂದು ಬೆಳ್ಳಂ ಬೆಳಿಗ್ಗೆಯೇ ಆದಂಪುರ ವಾಯುನೆಲೆಗೆ ಬಂದ ಪ್ರಧಾನಿ ಮೋದಿ ಅಲ್ಲಿನ ಸೈನಿಕರೊಂದಿಗೆ ಕೆಲವು ಕಾಲ ಕಳೆದಿದ್ದಾರೆ. ಅವರ ಉತ್ಸಾಹ ಹೆಚ್ಚಿಸುವ ಮಾತನಾಡಿದ್ದಾರೆ. ಬಳಿಕ ಅವರೊಂದಿಗೆ ಸೆಲ್ಫೀಗೆ ಪೋಸ್ ಕೊಟ್ಟು ನಿಮ್ಮ ಜೊತೆ ನಾನಿದ್ದೇನೆ ಎಂಬ ಸಂದೇಶ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳನ್ನು ಕೊಂದು ಕೋಲ್ಕತ್ತಾ ವಶಪಡಿಸಿಕೊಳ್ತೇನೆ ಎಂದ ಬಾಂಗ್ಲಾದೇಶ ಇಸ್ಲಾಮಿಸ್ಟ್ ವಿಡಿಯೋ