Daily Horoscope
✕

ಮೀಟಿಂಗ್ ನೇರಪ್ರಸಾರ ಎಡವಟ್ಟು: ದೆಹಲಿ ಸಿಎಂ ವರ್ತನೆಗೆ ಪ್ರಧಾನಿ ಮೋದಿ ಆಕ್ಷೇಪ

Webdunia
ಶನಿವಾರ, 24 ಏಪ್ರಿಲ್ 2021 (09:26 IST)
ನವದೆಹಲಿ: ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ನ್ನು ಟಿವಿ ಮಾಧ್ಯಮಗಳಿಗೆ ನೇರಪ್ರಸಾರ ಮಾಡಲು ಅವಕಾಶ ಕೊಟ್ಟು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಡವಟ್ಟು ಮಾಡಿದ್ದಾರೆ. ಇದಕ್ಕೆ ಸ್ವತಃ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Photo Courtesy: Google


ಪ್ರಧಾನಿ ಮೋದಿ ಜೊತೆಗೆ ಆಂತರಿಕ ಸಭೆ ನಡೆಸುತ್ತಿದ್ದಾಗ ಅದನ್ನು ಕೆಲವು ಸುದ್ದಿ ಮಾಧ್ಯಮಗಳು ನೇರಪ್ರಸಾರ ಮಾಡಿದ್ದವು. ಇದು ಪ್ರಧಾನಿ ಕಚೇರಿಯ ಗಮನಕ್ಕೂ ಬಂದಿದೆ. ಇದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಪ್ರಧಾನಿ ಮೋದಿ ‘ಕೆಲವು ಮುಖ್ಯಮಂತ್ರಿಗಳು ಆಂತರಿಕ ಸಭೆಯ ನೇರಪ್ರಸಾರ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕನಿಷ್ಠ ಸೈರಣೆ ಇರಬೇಕು’ ಎಂದಿದ್ದಾರೆ.

ಇನ್ನು, ಎಡವಟ್ಟು ಅರಿವಿಗೆ ಬರುತ್ತಿದ್ದಂತೇ ದೆಹಲಿ ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ. ನೇರಪ್ರಸಾರ ಮಾಡಬಾರದು ಎಂಬ ಬಗ್ಗೆ ಕೇಂದ್ರದಿಂದ ಸೂಚನೆ ಬಂದಿರಲಿಲ್ಲ. ಹೀಗಾಗಿ ಅಚಾತುರ್ಯವಾಗಿದೆ. ಇದಕ್ಕೆ ವಿಷಾಧಿಸುತ್ತೇವೆ ಎಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯವರು ದೇಶದ್ರೋಹಿಗಳ ಜೊತೆ ಸೇರುವಷ್ಟು ಅಸಹಾಯಕರಾದುದೇಕೆ: ವಿಜಯೇಂದ್ರ

ಜಲಪಾತದಲ್ಲಿ ಹಾಯಾಗಿ ಮಲಗಿದ್ದ ಯುವತಿ ಕೊಚ್ಚಿ ಹೋದಳು.. ಧಾರುಣ ಘಟನೆಯ Video

ಜಿಯೋ ಐಪಿಒ ಸಂಚಲನ: ಷೇರು ಖರೀದಿಗೆ ತಜ್ಞರ ಸಬ್‌ಸ್ಕ್ರೈಬ್ ಅಭಯ, ಶೇ 20 ರಷ್ಟು ಲಿಸ್ಟಿಂಗ್ ಗೇನ್ ನಿರೀಕ್ಷೆ

ಬೆಂಗಳೂರು ಟೌನ್ ಹಾಲ್ ಬಳಿ ತಿರಂಗಾ ಮಾರ್ಚ್ ಮಾಡಲು ಹೊರಟ ಸಿಜೆಪಿಗೆ ಒಪ್ಪಿಗೆ ಕೊಡದ ರಾಜ್ಯ ಸರ್ಕಾರ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments