ನವದೆಹಲಿ: ಕೊರೋನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಕೆಗೆ ಮಿತ್ರರಾಷ್ಟ್ರಗಳಿಂದ ಸಹಾಯ ಹಸ್ತ ಒದಗಿಬಂದಿದೆ.
ರಷ್ಯಾ, ಐರೋಪ್ಯ ಒಕ್ಕೂಟ, ಫ್ರಾನ್ಸ್ ನಿಂದ ಭಾರತಕ್ಕೆ ನೆರವು ಒದಗಿಬಂದಿದೆ. ರಷ್ಯಾ ಇನ್ನು 15 ದಿನಗಳಲ್ಲಿ ಆಮ್ಲಜನಕದ ಜೊತೆಗೆ ಕೊರೋನಾ ರೋಗಿಗಳಿಗೆ ಅಗತ್ಯವಾದ ರೆಮ್ ಡಿಸೀವರ್ ಇಂಜಕ್ಷನ್ ಔಷಧಿಯನ್ನೂ ನೀಡುವುದಾಗಿ ಹೇಳಿದೆ.
ಐರೋಪ್ಯ ರಾಷ್ಟ್ರಗಳು ಔಷಧದ ಜೊತೆಗೆ ಆಕ್ಸಿಜನ್ ಕಂಟೈನರ್ ಗಳನ್ನು ನೀಡಲು ಮುಂದೆ ಬಂದಿದೆ. ಫ್ರಾನ್ಸ್ ಯಾವುದೇ ನೆರವು ಬೇಕಾದರೂ ಕೊಡಲು ಸಿದ್ಧ ಎಂದು ಭರವಸೆ ನೀಡಿದೆ. ಇನ್ನು ಭಾರತೀಯ ಸೇನೆಯ ವೈದ್ಯಕೀಯ ಸೇವಾಸಂಸ್ಥೆ ವಿಮಾನಗಳು ಜರ್ಮನಿಯಿಂದ 23 ಸಂಚಾರಿ ಆಮ್ಲಜನಕ ಘಟಕಗಳನ್ನು ಭಾರತಕ್ಕೆ ತರಲಿವೆ. ಈ ಮೂಲಕ ಭಾರತದ ವಿಪತ್ತಿಗೆ ಮಿತ್ರರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ.