Select Your Language

Notifications

webdunia
webdunia
webdunia
webdunia

ನಾಳೆ ಗುಜರಾತ್ನ ಸೋಮನಾಥದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ನಾಳೆ ಗುಜರಾತ್ನ ಸೋಮನಾಥದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ , ಶುಕ್ರವಾರ, 20 ಆಗಸ್ಟ್ 2021 (10:11 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಗುಜರಾತ್ನ ಸೋಮನಾಥದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ನಡೆಸಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೋವಿಡ್ ಹಿನ್ನಲೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಸೋಮನಾಥ ದೇವಾಲಯದ ಹಳೆಯ ಶಿಲ್ಪಕಲೆಗಳ ಎಕ್ಸಿಬಿಷನ್ ಸೆಂಟರ್ ಅನ್ನು ಉದ್ಘಾಟನೆ ಮಾಡಲಿದ್ದಾರೆ. ಇಲ್ಲಿನ ಸೋಮನಾಥ ವಾಯುವಿಹಾರ, ಸೋಮನಾಥ ವಸ್ತುಪ್ರದರ್ಶನ ಕೇಂದ್ರ, ಮತ್ತು ಹಳೆಯ (ಜುನ) ಸೋಮನಾಥನ ಪುನರ್ ನಿರ್ಮಿತ ದೇವಾಲಯದ ಆವರಣಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಪಾರ್ವತಿ ದೇವಾಲಯಕ್ಕೆ ಶಿಲಾನ್ಯಾಸ ಕೂಡ ಮಾಡಲಿದ್ದಾರೆ.
ದೇಶದ ಪ್ರಮುಖ ದೇವಾಲಯಗಳಲ್ಲಿ ಸೋಮನಾಥ ಮಂದಿರ ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೋಮನಾಥ ಟ್ರಸ್ಟ್ನ ಅಧ್ಯಕ್ಷರು ಕೂಡ ಆಗಿದ್ದಾರೆ. ಈ ಟ್ರಸ್ಟ್ ದೇವಾಲಯದ ಆವರಣಗಳ ನಿರ್ವಹಣೆಯ ಜವಬ್ದಾರಿಯನ್ನು ಹೊಂದಿದೆ.
ಈ ಯೋಜನೆಗಳನ್ನು ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಪರಂಪರೆಯ ವರ್ಧನೆ ಅಡಿ ಅಭಿವೃದ್ಧಿ ಪಡಿಸಲಾಗಿದೆ. ಸಮುದ್ರ ಸವೆತವನ್ನು ತಪ್ಪಿಸುವ ಉದ್ದೇಶದಿಂದ ದೇವಾಲಯದ ಪಕ್ಕದಲ್ಲಿ ವಾಯು ವಿಹಾರ ನಿರ್ಮಿಸಲಾಗಿದೆ. ಇನ್ನು ಈ ಯೋಜನೆಗಳಿಗೆ 2018ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ಮಾಡಿದ್ದರು


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ವರಮಹಾಲಕ್ಷ್ಮಿ ಹಬ್ಬ, ಪೂಜಾ ವಿಧಾನಗಳೇನು?