Select Your Language

Notifications

webdunia
webdunia
webdunia
webdunia

Operation Sindoor ಟಾರ್ಗೆಟ್ ಏನಾಗಿತ್ತು ಎಂದು ಬಹಿರಂಗಪಡಿಸಿದ ಪ್ರಧಾನಿ ಮೋದಿ

PM Modi

Krishnaveni K

ಪಂಜಾಬ್ , ಮಂಗಳವಾರ, 13 ಮೇ 2025 (16:46 IST)
Photo Credit: X
ಪಂಜಾಬ್: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ನಮ್ಮ ಟಾರ್ಗೆಟ್ ಯಾವುದಾಗಿತ್ತು ಎಂಬುದನ್ನು ಪ್ರಧಾನಿ ಮೋದಿ ಇಂದು ಬಹಿರಂಗಪಡಿಸಿದ್ದಾರೆ.

ಇಂದು ಪಂಜಾಬ್ ನ ಆದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಯೋಧರೊಂದಿಗೆ ಬೆರೆತರು. ಬಳಿಕ ಮಾತನಾಡಿದ ಅವರು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

‘ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಉಗ್ರರ ಮುಖ್ಯ ಕಚೇರಿಗಳನ್ನು ಧ್ವಂಸ ಮಾಡುವುದೇ ನಮ್ಮ ಟಾರ್ಗೆಟ್ ಆಗಿತ್ತು. ನಮ್ಮ ವಾಯುಸೇನೆ ಕೇವಲ 20-25 ನಿಮಿಷದಲ್ಲಿ ಅದನ್ನು ಮಾಡಿ ಮುಗಿಸಿತು’ ಎಂದು ಮೋದಿ ಕೊಂಡಾಡಿದ್ದಾರೆ.

‘ನಾವು ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರೋತ್ಸಾಹಿಸುವವರ ಮುಂದೆ ಒಂದು ಲಕ್ಷಣ ರೇಖೆ ಎಳೆದಿದ್ದೇವೆ. ಅದನ್ನು ದಾಟಿ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇದನ್ನು ಈ ಹಿಂದೆ ನಡೆದ ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಮತ್ತು ಈಗ ನಡೆದ ಆಪರೇಷನ್ ಸಿಂಧೂರ್ ನಲ್ಲಿ ನೋಡಿದ್ದೇವೆ. ಭಾರತ ತಕ್ಕ ತಿರುಗೇಟು ನೀಡಲಿದೆ’ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka: ಭಾರತೀಯ ಸೇನೆಗಾಗಿ ಬಿಜೆಪಿಯಿಂದ ಪಕ್ಷಾತೀತ ತಿರಂಗಾ ಯಾತ್ರೆ