Daily Horoscope
✕

ಪೆಹಲ್ಗಾಮ್ ದಾಳಿಗೆ ಒಂದು ವರ್ಷ: ದೇಶ ಈ ದಿನವನ್ನು ಎಂದೂ ಮರೆಯಲ್ಲ ಪ್ರಧಾನಿ ಮೋದಿ ಸ್ಮರಣೆ

ಕೃಷ್ಣವೇಣಿ ಕೆ
ಬುಧವಾರ, 22 ಏಪ್ರಿಲ್ 2026 (09:16 IST)
ನವದೆಹಲಿ: ಪೆಹಲ್ಗಾಮ್ ನಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಪೆಹಲ್ಗಾಮ್ ದಾಳಿ ಸಂತ್ರಸ್ತರಿಗೆ ನಮನ ಸಲ್ಲಿಸಿರುವ ಪ್ರಧಾನಿ ಮೋದಿ ಈ ಕೃತ್ಯವನ್ನು ಯಾವತ್ತೂ ನಾವು ಮರೆಯಲ್ಲ ಎಂದು ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಏಪ್ರಿಲ್ 22, 2025 ರಂದು ಇದೇ ದಿನ ಬೈಸರಣ್ ವ್ಯಾಲಿಯಲ್ಲಿ ತಮ್ಮ ಕುಟುಂಬದವರ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದ ಭಾರತೀಯ ನಾಗರಿಕರ ಮೇಲೆ ಪಾಕ್ ಪ್ರೇರಿತ ಉಗ್ರರು ನೀನು ಹಿಂದೂನಾ, ಮುಸ್ಲಿಮಾ ಎಂದು ಧರ್ಮ ಕೇಳಿ ಕುಟುಂಬದವರ ಮುಂದೆಯೇ ಪುರುಷರನ್ನು ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.

ಈ ಘಟನೆ ಬಳಿಕ ಭಾರತೀಯ ಸೇನೆ ಆಪರೇಷನ್ ಸಿಂಧೂರ್, ಆಪರೇಷನ್ ಮಹದೇವ ನಡೆಸಿ ಉಗ್ರರ ಸಂಹಾರ ನಡೆಸಿತ್ತು. ಭಾರತಕ್ಕೆ ಉಗ್ರರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತ್ತು. ಈ ಘಟನೆ ಬಗ್ಗೆ ಇಂದು ಪ್ರಧಾನಿ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಪೆಹಲ್ಗಾಮ್ ನಲ್ಲಿ ನಡೆದಿದ್ದ ಉಗ್ರರ ಪೈಶಾಚಿಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರನ್ನು ಈ ದಿನ ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಯಾವತ್ತೂ ಮರೆತು ಹೋಗಲಾರರು. ಅವರ ಕುಟುಂಬಸ್ಥರ ಜೊತೆಗೆ ನಾನು ಎಂದೆಂದಿಗೂ ಇರುತ್ತೇನೆ. ದೇಶವಾಗಿ ಈ ದುಃಖದಲ್ಲಿ ನಾವು ಜೊತೆಯಾಗಿ ನಿಲ್ಲುತ್ತೇವೆ. ಉಗ್ರರ ಯಾವುದೇ ಕೃತ್ಯವನ್ನು ಯಶಸ್ವಿಯಾಗಲು ನಾವು ಬಿಡಲ್ಲ’ ಎಂದು ಮೋದಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ನಂದಿನಿ ಹಾಲು ಬೆಲೆ ಏರಿಕೆ ಬಗ್ಗೆ ತುಟಿ ಬಿಚ್ಚಿದ ಬಿಜೆಪಿ ನಾಯಕ ಬಿವೈ ವಿಜಯೇಂದ್ರ: ಹೇಳಿದ್ದೇನು ನೋಡಿ

ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ಎಚ್ ಎಂಟಿ ವಾಚ್ ಬಿಡುಗಡೆ: ಬೆಲೆ ಎಷ್ಟು, ಎಲ್ಲಿ ಖರೀದಿಸಬಹುದು ನೋಡಿ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ

ಆನೆ ನಡೆವಾಗ ತೋಳ, ನರಿ ಹೋಗುವಂತೆ: ಯಡಿಯೂರಪ್ಪ, ದೇವೇಗೌಡ ಭೇಟಿ ಕುರಿತು ಹರಿಪ್ರಸಾದ್ ವ್ಯಂಗ್ಯ

ನೀ ಯಾರಾದ್ರೆ ನಂಗೇನು… ನುಂಗಿಬಿಡುತ್ತೇನೆ ಎಂದು ಮನೆಯಂಗಳಕ್ಕೆ ಬಂದಿದ್ದ ಚಿರತೆ ನೋಡಿ ನಾಯಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments