Webdunia - Bharat's app for daily news and videos

Install App

ಪೆಹಲ್ಗಾಮ್ ಗೆ ಈಗ ಪ್ರವಾಸಿಗರು ಬರ್ತಿದ್ದಾರಾ, ಹೇಗಿದೆ ಸೆಕ್ಯುರಿಟಿ

ಕೃಷ್ಣವೇಣಿ ಕೆ
ಬುಧವಾರ, 22 ಏಪ್ರಿಲ್ 2026 (09:01 IST)
ಜಮ್ಮು ಕಾಶ್ಮೀರ: ಕಳೆದ ವರ್ಷ ಇದೇ ದಿನ ಪೆಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಭೀಕರ ದಾಳಿ ನಡೆಸಿ 26 ಹಿಂದೂ ನಾಗರಿಕರನ್ನು ಕೊಂದು ಹಾಕಿದ್ದರು. ಈ ಹೇಯ ಕೃತ್ಯಕ್ಕೆ ಇಂದು ವರ್ಷವಾಗಿದ್ದು, ಇದೀಗ ಪ್ರವಾಸಿಗರು ಅಲ್ಲಿಗೆ ಬರುತ್ತಿದ್ದಾರಾ, ಸೆಕ್ಯುರಿಟಿ ಹೇಗಿದೆ ಇಲ್ಲಿದೆ ವಿವರ.

ಪೆಹಲ್ಗಾಮ್ ನ ಬೈಸರಣ್ ಹುಲ್ಲುಗಾವಲಿನ ಮೇಲೆ ತಮ್ಮ ಕುಟುಂಬದವರ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಭಾರತೀಯ ಮುಗ್ಧ ನಾಗರಿಕರ ಮೇಲೆ ಅಡವಿ ಕಡೆಯಿಂದ ಬಂದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ಹತ್ಯಾಕಾಂಡ ನಡೆಸಿದ್ದರು.

ಈ ದಾಳಿ ಬಳಿಕ ಕಾಶ್ಮೀರ ಪ್ರವಾಸ ಮಾಡಲು ಜನ ಹಿಂದೇಟು ಹಾಕುತ್ತಿದ್ದರು. ಇದರಿಂದ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಜಮ್ಮು ಕಾಶ್ಮೀರ ಜನರಿಗೆ ಕೊಂಚ ಹೊಡೆತ ನೀಡಿತ್ತು. ಆದರೆ ಈ ಘಟನೆಯಾದ ಬಳಿಕ ಕಾಶ್ಮೀರದಲ್ಲಿ ಪ್ರವಾಸೀ ತಾಣಗಳಿಗೆ ಭದ್ರತೆ ಹೆಚ್ಚಿಸಲಾಯಿತು. ಇದಾದ ಬಳಿಕ ತುಲಿಪ್ ಗಾರ್ಡನ್ ಸೇರಿದಂತೆ ಇತರೆ ಜಾಗಗಳಿಗೆ ಜನ ಮತ್ತೆ ಬರಲು ಅರಂಭಿಸಿದ್ದರು.

ಇದೀಗ ಪೆಹಲ್ಗಾಮ್ ಗೂ ನಿತ್ಯವೂ ಸಾಕಷ್ಟು ಜನ ಭೇಟಿ ನೀಡುತ್ತಿದ್ದಾರೆ. ಅಂದಿನ ಕಹಿ ಘಟನೆ ಬಳಿಕ ಇಲ್ಲಿ ಭದ್ರತಾ ಸಿಬ್ಬಂದಿ ಗಸ್ತು ಹೆಚ್ಚಿಸಲಾಗಿದೆ. ಈ ಸ್ಥಳದಲ್ಲಿ ಸಿಆರ್ ಪಿಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು ಸದಾ ಗಸ್ತು ತಿರುಗುತ್ತಿರುತ್ತಾರೆ. ಇಲ್ಲಿನ ಸಿಬ್ಬಂದಿಗಳಿಗೆ ಕ್ಯೂ ಆರ್ ಕೋಡ್ ಆಧಾರಿತ ದೃಢೀಕರಣ ನೀಡಲಾಗಿದೆ. ಎಂಟ್ರಿ ಪಾಯಿಂಟ್ ಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ. ಇದೀಗ ಪೆಹಲ್ಗಾಮ್ ದಾಳಿಗೆ ಒಂದು ವರ್ಷವಾದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾಶ್ಮೀರದ ಪ್ರವಾಸೀ ತಾಣಗಳಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದ್ದು ಯೋಧರು ಕಟ್ಟೆಚ್ಚರ  ವಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅರ್ಧಸೇವಿಸಿದ ಸ್ಯಾಂಡ್‌ವಿಜ್‌ನಲ್ಲಿ ಏನೋ ಉರುಳಾಡುತ್ತಿದೆ ಎಂದು ನೋಡಿದಾಗ ಕಂಡಿದ್ದು ಜೀವಂತ ಹುಳು, Video

ದಕ್ಷಿಣ ಕನ್ನಡದಲ್ಲಿ ನಾಳೆ ಈದ್ ಮಿಲಾದ್‌: ಈಚೆಗಿನ ಸಂಘರ್ಷ ನಡುವೆ ಹೆಚ್ಚಿಸಿದ ಬಿಗಿ ಭದ್ರತೆ

ಪಡುಬಿದ್ರಿ ಡೇವಿಡ್ ಡಿಸೋಜಾ ಹತ್ಯೆ ಹಿಂದಿನ ಉದ್ದೇಶ ಕೊನೆಗೂ ಬಯಲು

ತಮಿಳುನಾಡು ವಿಧಾನಸಭೆಯ ಐದು ಉಪಚುನಾವಣೆಗಳ ಮೇಲಿನ ತಡೆಯಾಜ್ಞೆ ವಿಸ್ತರಣೆ

ಒಬ್ಬರೇ ವಾಸವಿದ್ದ ಮಹಿಳೆಯ ಮನೆಯನ್ನು ಶೋಧ ನಡೆಸಿದಾಗ ಸಿಕ್ತು ಲಕ್ಷ ಲಕ್ಷ ಹಣ

ಮುಂದಿನ ಸುದ್ದಿ
Show comments