Publish Date: Wed, 22 Apr 2026 (08:36 IST)
Updated Date: Wed, 22 Apr 2026 (08:40 IST)
ಜಮ್ಮು ಕಾಶ್ಮೀರ: ನೀನು ಹಿಂದೂನಾ ಎಂದು ಮಹಿಳೆಯರ ಸಿಂಧೂರ ಅಳಿಸಿ ಹಾಕಿದ ಪೆಹಲ್ಗಾಮ್ ಉಗ್ರದಾಳಿಗೆ ಇಂದು ವರ್ಷ ತುಂಬಿದೆ. ಆ ದಿನವನ್ನು ಭಾರತ ಎಂದಿಗೂ ಮರೆಯದು.
ಕಳೆದ ವರ್ಷ ಇದೇ ದಿನ ಕಾಶ್ಮೀರ ಕಣಿವೆಯ ಪೆಹಲ್ಗಾಮ್ ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದ ಭಾರತೀಯ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ಗುಂಡಿನ ಮಳೆಗೆರೆದಿದ್ದರು.
ಪೆಹಲ್ಗಾಮ್ ಕಾಡು ಪ್ರದೇಶದಿಂದ ವ್ಯೂ ಪಾಯಿಂಟ್ ಕಡೆಗೆ ಬಂದ ಉಗ್ರರು ಅಲ್ಲಿ ಸಿಕ್ಕ ಸಿಕ್ಕವರನ್ನು ನೀನು ಹಿಂದೂನಾ, ಮುಸ್ಲಿಮಾ ಎಂದು ಕೇಳಿ ಗಂಡು ಮಕ್ಕಳನ್ನೇ ಟಾರ್ಗೆಟ್ ಮಾಡಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ರೀತಿ ಮತಾಂಧರ ಗುಂಡಿಗೆ ಬಲಿಯಾದವರ ಸಂಖ್ಯೆ 26 ಆಗಿತ್ತು. ಪತ್ನಿ, ಮಕ್ಕಳ ಎದುರೇ ಪತಿಯಂದಿರ ಕೊಲೆಯಾಗಿತ್ತು.
ಈ ನರಮೇಧಕ್ಕೆ ಇಡೀ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಮೃತರ ಪೈಕಿ ಮದುವೆಯಾಗಿ ಕೇವಲ 6 ದಿನಗಳಷ್ಟೇ ಆಗಿದ್ದ, ಹನಿಮೂನ್ ಖುಷಿಯಲ್ಲಿದ್ದ ವಿನಯ್ ನರವಾಲೆ ಪತ್ನಿ, ಮೈತುಂಬಾ ಗಂಡನ ರಕ್ತ ಮೆತ್ತಿಕೊಂಡಿದ್ದ ಶಿವಮೊಗ್ಗ ಮಂಜುನಾಥ್ ರಾವ್ ಪತ್ನಿಯ ಫೋಟೋಗಳು ನಮ್ಮನ್ನು ತಲ್ಲಣಗೊಳಿಸಿತ್ತು.
ಈ ಘಟನೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಅದಾದ ಬಳಿಕ ಭಾರತ ಆಪರೇಷನ್ ಸಿಂಧೂರ್ ಮೂಲಕ ಉಗ್ರರ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. ಆದರೆ ಅಂದು ಗಂಡಂದಿರನ್ನು ಕಳೆದುಕೊಂಡವರು ಇಂದಿಗೂ ನಿಟ್ಟುಸಿರು ಬಿಡುತ್ತಾ ಕಾಲ ಕಳೆಯುತ್ತಿದ್ದಾರೆ. ಅವರು ಕಳೆದುಕೊಂಡಿದ್ದನ್ನು ಜೀವನದಲ್ಲಿ ಯಾರಿಗೂ ತುಂಬಿಕೊಡಲಾಗದು. ಆದರೆ ಮತ್ತೆ ಇಂತಹ ಘಟನೆಗಳಾಗದಂತೆ ತಡೆಯುವುದು ನಮ್ಮ ಕರ್ತವ್ಯವಾಗಿದೆ. ಭಯೋತ್ಪಾದಕರ ಹುಟ್ಟಡಗಿಸುವ ನಮ್ಮ ಸೇನಾನಿಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಆದ್ಯತೆಯಾಗಬೇಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ