Daily Horoscope

Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನವೇ ಭಾರತಕ್ಕೆ ಕರಾಳ ದಿನ: ಪುಲ್ವಾಮ ದಾಳಿಗೆ ಇಂದು 6 ವರ್ಷ

Pulwama terror attack 2019
Photo Credit: X
ನವದೆಹಲಿ: ಜಗತ್ತಿಡೀ ಪ್ರೇಮಿಗಳ ದಿನ ಆಚರಣೆ ಮಾಡುತ್ತಿದ್ದರೆ ಭಾರತಕ್ಕೆ ಮಾತ್ರ ಇಂದು ಕರಾಳ ದಿನ. ಯಾಕೆಂದರೆ ಇದೇ ದಿನ 6  ವರ್ಷಗಳ ಹಿಂದೆ ಪುಲ್ವಾಮದಲ್ಲಿ ನಮ್ಮ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದರು.

2019 ರ ಫೆಬ್ರವರಿ 14 ರಂದು ಪುಲ್ವಾಮದಲ್ಲಿ ನಮ್ಮ ವೀರ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್ ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿತ್ತು. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು.

ಘಟನೆಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿಯಿಂದ ಭಾರತ ಆಕ್ರೋಶದಲ್ಲಿ ಕುದ್ದು ಹೋಗಿತ್ತು. ಆದರೆ ಪಾಕಿಸ್ತಾನ ಎಂದಿನಂತೆ ಇದರಲ್ಲಿ ತನ್ನ ಪಾತ್ರವಿಲ್ಲ ಎಂದಿತು. ಪಾಕಿಸ್ತಾನಕ್ಕೆ ಚೀನಾ ಕೂಡಾ ಬೆಂಬಲವಾಗಿ ನಿಂತಿತು.

ಆದರೆ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ರಾಜತಾಂತ್ರಿಕವಾಗಿ ನಿರ್ಬಂಧ ವಿಧಿಸಿತ್ತು. ಪಾಕಿಸ್ತಾನದ ಸರಕುಗಳ ಮೇಲಿನ ಸುಂಕ ಹೆಚ್ಚು ಮಾಡಿತು. ಹಲವು ಉಗ್ರರನ್ನು ಬಂಧಿಸಿತು. ಇದಾಗಿ 12 ದಿನಗಳ ಬಳಿಕ ಬಾಲಾಕೋಟ್ ನಲ್ಲಿರುವ ಜೈಶ್ ಸಂಘಟನೆಯ ಶಿಬಿರಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತು. ಪಾಕಿಸ್ತಾನದ ಗಡಿ ಪ್ರದೇಶದೊಳಕ್ಕೆ ಹೋಗಿ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 250 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರೆಸ್ಟ್ ಆದ ಬೆನ್ನಲ್ಲೇ ಶಾಸಕ ಬೈರತಿ ಬಸವರಾಜುಗೆ ಎದೆನೋವು: ಜಯದೇವ ಆಸ್ಪತ್ರೆಗೆ ದಾಖಲು