Select Your Language

Notifications

webdunia
webdunia
webdunia
webdunia

ಧರ್ಮದೇಟು ಕೊಟ್ಟಾರೆಂದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಗುದ್ದು

ಧರ್ಮದೇಟು ಕೊಟ್ಟಾರೆಂದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಗುದ್ದು
ನವದೆಹಲಿ , ಗುರುವಾರ, 6 ಫೆಬ್ರವರಿ 2020 (15:53 IST)
ನವದೆಹಲಿ: ದೇಶದಲ್ಲಿ ಇದೇ ರೀತಿ ನಿರುದ್ಯೋಗ ಸಮಸ್ಯೆ ಮುಂದುವರಿದರೆ ಮುಂದಿನ ಆರು ತಿಂಗಳಲ್ಲಿ ಯುವಕರಿಂದ ಪ್ರಧಾನಿ ಮೋದಿಗೆ ಏಟು ಬೀಳೋದು ಗ್ಯಾರಂಟಿ ಎಂದಿದ್ದ ರಾಹುಲ್ ಗಾಂಧಿಗೆ ನಮೋ ಲೋಕಸಭೆಯಲ್ಲಿ ತಿರುಗೇಟು ನೀಡಿದ್ದಾರೆ.


ಲೋಕಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ವಿಪಕ್ಷಗಳಿಗೆ ಮಾತಿನ ಏಟು ಕೊಟ್ಟಿದ್ದಾರೆ. ತಮ್ಮ ಭಾಷಣದ ನಡುವೆ ಎದ್ದು ನಿಂತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ಕೊಡಲು ಮುಂದಾದಾಗ ‘ನೋಡಿ ನಾನು 30-40 ನಿಮಿಷದಿಂದ ಭಾಷಣ ಮಾಡುತ್ತಿದ್ದೇನೆ. ಇಲ್ಲಿಂದ ಅಲ್ಲಿಗೆ ಕರೆಂಟ್ ಪಾಸಾಗಿ ಟ್ಯೂಬ್ ಲೈಟ್ ಉರಿಯಲು ಇಷ್ಟು ಹೊತ್ತು ಬೇಕಾಯಿತು’ ಎಂದು ವ್ಯಂಗ್ಯ ಮಾಡಿದರು.

ಬಳಿಕ ರಾಹುಲ್ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ‘ನನಗೆ ಇನ್ನು ಆರು ತಿಂಗಳಲ್ಲಿ ಏಟು ಬೀಳೋದು ಗ್ಯಾರಂಟಿ ಎಂದು ಒಬ್ಬ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ನಾನು ಈಗ ಅದಕ್ಕಾಗಿ ಪ್ರತಿನಿತ್ಯ ಸ್ವಲ್ಪ ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತೇನೆ. ಯಾಕೆಂದರೆ ಇಂತಹ ಏಟುಗಳನ್ನು ತಡೆದುಕೊಳ್ಳಲು ಶಕ್ತಿ ಬೇಕಲ್ಲಾ? ಕಳೆದ 20 ವರ್ಷದಿಂದ ಸಾಕಷ್ಟು ಟೀಕೆ-ಟಿಪ್ಪಣಿ ಕೇಳಿ ಅಭ್ಯಾಸವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ಸರ್ಕಸ್ ಅಂತ್ಯ : ಬಿಜೆಪಿಯಲ್ಲಿ ಹೊಸ ಬೆಳವಣಿಗೆ ಶುರು