Publish Date: Tue, 04 Feb 2020 (11:48 IST)
Updated Date: Tue, 04 Feb 2020 (11:51 IST)
ಬಹುದಿನಗಳ ನಂತರ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗ್ತಿದ್ದಂತೆ ಇದೀಗ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.
ಕಲ್ಯಾಣ ಕರ್ನಾಟಕ ಭಾಗದ ಶಾಸಕರನ್ನು ಸಿಎಂ ಕಡೆಗಣಿಸುತ್ತಿರೋದಕ್ಕೆ ಬಿಜೆಪಿಯ ಶಾಸಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿ ಶುರುವಿಟ್ಟುಕೊಂಡಿದ್ದಾರೆ. ಯೋಗೇಶ್ವರ್ ಪರ ಪಕ್ಷದ ಕೆಲವು ಮುಖಂಡರು ಒಲವು ಹೊಂದಿದ್ದಾರೆ. ಮತ್ತೊಂದಿಷ್ಟು ಮಂತ್ರಿ ಸ್ಥಾನ ಆಕಾಂಕ್ಷಿಗಳು ವಿರೋಧ ಮಾಡ್ತಿದ್ದಾರೆ.
ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಭಾಗದ ಕೆಲವು ಬಿಜೆಪಿ ಶಾಸಕರು ಶಾಸಕರ ಭವನದಲ್ಲಿ ಸಭೆ ಸೇರಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಬಾರದು ಅಂತ ಚರ್ಚೆ ನಡೆಸಿದ್ದಾರೆ.
ಒಂದು ವೇಳೆ ಸೋತವರಿಗೆ ಮಂತ್ರಿ ಮಾಡಿದರೂ ಬಂಡಾಯದ ಬಾವುಟ ಹಾರೋ ಲಕ್ಷಣಗಳು ಗೋಚರಿಸತೊಡಗಿವೆ.