Select Your Language

Notifications

webdunia
webdunia
webdunia
webdunia

‘ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕಂಡರೆ ಭಯ’

webdunia
ನವದೆಹಲಿ , ಶನಿವಾರ, 18 ನವೆಂಬರ್ 2017 (08:37 IST)
ನವದೆಹಲಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯಲ್ಲಾದ ಪರಿವರ್ತನೆ ನೋಡಿ ಭಯ  ಹುಟ್ಟಿಕೊಂಡಿದೆ ಎಂದು ಮಾಜಿ ಕೇಂದ್ರ ಸಚಿವ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
 

‘ರಾಹುಲ್ ಗಾಂಧಿಯಲ್ಲಾದ ಬದಲಾವಣೆ, ಜನಪ್ರಿಯತೆ ಮೋದಿಗೆ ಭಯ ತಂದಿದೆ. ಇದಕ್ಕೇ ಇತ್ತೀಚೆಗೆ ಕೇಂದ್ರ ಸರ್ಕಾರ, ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದು, ಬೋಫೋರ್ಸ್ ಹಗರಣದಂತಹ ವಿಚಾರಗಳನ್ನು ಕೆದಕುತ್ತಿದೆ’ ಎಂದು ಪವಾರ್ ಟೀಕಿಸಿದ್ದಾರೆ.

‘ನಮ್ಮ ದೇಶ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ಜವಹರ್ ಲಾಲ್ ನೆಹರೂ ಅವರ ದೂರದೃಷ್ಟಿಯಿಂದಾಗಿ ಈ ಸ್ಥಾನಕ್ಕೇರಿದೆ. ಇಂದು ರಾಜೀವ್ ಗಾಂಧಿ ಬದುಕಿಲ್ಲ. ಬೋಫೋರ್ಸ್ ಹಗರಣದ ರೂವಾರಿ ಉದ್ಯಮಿಯೂ ಇಲ್ಲ. ಹಾಗಿರುವಾಗ ಕೇಂದ್ರಕ್ಕೆ ಮತ್ತೆ ಆ ಪ್ರಕರಣವನ್ನು ಮರು ವಿಚಾರಣೆ ಮಾಡುವ ತವಕವೇಕೆ?’ ಎಂದು ಪವಾರ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಮದಾಟ ಆಡುವ ಬಾ ಅಂದ,,ಅವಳು ಬೇಡ ಅಂದ್ಳು, ಕೊಂದೆ ಹಾಕಿದ ಭೂಪ