Publish Date: Fri, 17 Nov 2017 (20:03 IST)
Updated Date: Fri, 17 Nov 2017 (20:09 IST)
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸೆಕ್ಸ್ ಸುಖ ಸರಿಯಾಗಿ ಕೊಡಲಿಲ್ಲ ಎನ್ನುವ ಕೋಪದ ಭರದಲ್ಲಿ ಪತ್ನಿಯನ್ನೇ ಕೊಂದಹಾಕಿದ ಕ್ರೂರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಸುಮನ್ ಹಲವು ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಜ್ವರದಿಂದಾಗಿ ತೀವ್ರ ಬಳಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ
ಕೆಲಸ ಮುಗಿಸಿ ಮನೆಗೆ ಬಂದ ಪತಿ ಸಂಜೀವ್ ಕುಮಾರ್, ಪತ್ನಿ ಸುಮನ್‌ಗೆ ಕಾಮದಾಟ ಆಡುವ ಬಾ ಎಂದು ಕರೆದಿದ್ದಾನೆ. ಆದರೆ, ಸುಮನ್ ಆರೋಗ್ಯ ಸರಿಯಿಲ್ಲ ದಯವಿಟ್ಟು ಬೇಡ ಎಂದು ಆತನ ಬೇಡಿಕೆಯನ್ನು ತಿರಸ್ಕರಿಸಿದ್ದಾಳೆ.
ಇದರಿಂದ ಇಬ್ಬರ ನಡುವೆ ವಾದ ವಿವಾದ ಉಲ್ಬಣಗೊಂಡಿದೆ. ಕೋಪದ ಭರದಲ್ಲಿ ಪತಿ ಸಂಜೀವ್ ಕುಮಾರ್ ಪತ್ನಿ ಸುಮನ್‌ಳ ಕತ್ತು ಹಿಸುಕಿದ್ದಾನೆ. ಆತನ ತನ್ನ ಶಕ್ತಿಯನ್ನೆಲ್ಲಾ ಹಾಕಿ ಕತ್ತು ಹಿಸುಕಿದ್ದರಿಂದ ಅನಾರೋಗ್ಯದಿಂದ ಇದ್ದ ಸುಮನ್ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಸುಮನ್ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ ಸಂಜೀವ್ ಕುಮಾರ್ ಸೇರಿದಂತೆ ಅವರ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.