Publish Date: Fri, 14 Sep 2018 (09:08 IST)
Updated Date: Fri, 14 Sep 2018 (09:10 IST)
ನವದೆಹಲಿ: ಇನ್ನು ಮುಂದೆ ನೀವು ಅಥವಾ ನಿಮ್ಮ ಕುಟುಂಬದವರು ವಿದೇಶ ಪ್ರಯಾಣ ಕೈಗೊಳ್ಳುವ ಮೊದಲು ನನಗೆ ತಿಳಿಸಿ ಎಂದು ಪ್ರಧಾನಿ ಮೋದಿ ದೇಶದ ಎಲ್ಲಾ ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.
ಅಷ್ಟಕ್ಕೂ ಪ್ರಧಾನಿ ಯಾಕೆ ಇಂತಹದ್ದೊಂದು ಸೂಚನೆ ನೀಡಿದ್ದಾರೆ ಗೊತ್ತಾ? ವಿಪಕ್ಷಗಳ ಆರೋಪಗಳಿಂದ ತಪ್ಪಿಸಿಕೊಳ‍್ಳಲು ಮತ್ತು ಅಧಿಕಾರಶಾಹಿ ನಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹೀಗೆ ಸೂಚನೆ ನೀಡಿದ್ದಾರೆ.
‘ಕೆಲವೊಮ್ಮೆ ಸಿಎಂ ಅಥವಾ ಅವರ ಕುಟುಂಬದ ವಿದೇಶ ಪ್ರಯಾಣದ ಖರ್ಚು ವೆಚ್ಚದ ಬಗ್ಗೆ ವಿಪಕ್ಷಗಳು ಟೀಕಾಸ್ತ್ರವಾಗಿ ಬಳಸುವುದು ಇದೆ. ಹೀಗಾಗಿ ವಿದೇಶೀ ಯಾನದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿದರೆ ವಿಪಕ್ಷಗಳ ಟೀಕೆಗೆ ತಕ್ಕ ತಿರುಗೇಟು ಕೊಡಬಹುದು’ ಎಂದು ಮೋದಿ ಹೇಳಿರುವುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಲೋಕಸಭೆ ಚುನಾವಣೆ ಮತ್ತು ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೋದಿ ಇಂತಹದ್ದೊಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.