ಪುಟ್ಟಪರ್ತಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 21 ನೇ ಕಂತಿನ ಹಣವನ್ನು ಇಂದು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಇಂದೇ ನಿಮ್ಮ ಖಾತೆಗಳನ್ನು ಚೆಕ್ ಮಾಡಿ.
ಪಿಎಂ ಕಿಸಾನ್ ಯೋಜನೆಯಡಿ ನೊಂದಾಯಿಸಿಕೊಂಡ ರೈತರಿಗೆ ಪ್ರತೀ ವರ್ಷ ಮೂರು ಕಂತುಗಳಲ್ಲಿ ತಲಾ 2,000 ರೂ.ಗಳಂತೆ ವಾರ್ಷಿಕವಾಗಿ 6,000 ರೂ. ಪ್ರೋತ್ಸಾಹ ಧನ ಸಿಗುತ್ತದೆ. ಈಗಾಗಲೇ 20 ಕಂತುಗಳ ಹಣ ಬಿಡುಗಡೆಯಾಗಿದೆ.
ಇದೀಗ ಪ್ರಧಾನಿ ಮೋದಿ 21 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೃಷಿ ಶೃಂಗಸಭೆ ಉದ್ಘಾಟಿಸಿದ ಅವರು 21 ನೇ ಕಂತಿನ ಹಣವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ನಿಮ್ಮ ನೊಂದಾಯಿತ ಬ್ಯಾಂಕ್ ಖಾತೆಯನ್ನು ಇಂದೇ ಪರೀಕ್ಷಿಸಿಕೊಳ್ಳಿ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ pmkisan.gov.in ಎಂಬ ವೆಬ್ ಸೈಟ್ ಮುಖಾಂತರ ಹೆಸರು ನೊಂದಾಯಿಸಿರಬೇಕು. ಇಲ್ಲಿ ನಿಮ್ಮ ಭೂಮಿ, ಪಹಣಿ ಇತ್ಯಾದಿ ವಿವರಗಳನ್ನು ನೀಡಬೇಕಾಗುತ್ತದೆ. ಆನ್ ಲೈನ್ ಮೂಲಕ ನೊಂದಾಯಿಸಿಕೊಳ್ಳಲು ಗೊತ್ತಾಗದಿದ್ದಲ್ಲಿ ನಿಮ್ಮ ಸ್ಥಳೀಯ ಕೃಷಿ ಕಚೇರಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ. ಒಂದು ವೇಳೆ ಹೊಸದಾಗಿ ಅರ್ಜಿ ಸಲ್ಲಿಸುವುದಿದ್ದರೆ ಸಲ್ಲಿಸಬಹುದು. ಆಥವಾ ನಿಮ್ಮ ಕೆವೈಸಿ ಅಪ್ ಡೇಟ್ ಆಗದೇ ಇದ್ದು, ಇನ್ನಿತರ ಕಾರಣಗಳಿಗೆ ಹಣ ಖಾತೆಗೆ ಬರದೇ ಇದ್ದಲ್ಲಿ ಇಲ್ಲಿ ಸಹಾಯ ಪಡೆಯಬಹುದಾಗಿದೆ.