ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Krishnaveni K
ಶನಿವಾರ, 14 ಜೂನ್ 2025 (13:52 IST)
ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನವಾಗುವ ಮೊದಲು ಎಟಿಸಿ ಕೇಂದ್ರಕ್ಕೆ ಮೇಡೇ ಎಂದು ಮಾತ್ರವಲ್ಲ, ಪೈಲಟ್ ಹೀಗೊಂದು ಮಹತ್ವದ ಸಂದೇಶ ರವಾನಿಸಿದ್ದರು ಎಂಬುದು ಈಗ ಬಯಲಾಗಿದೆ.

ಗುಜರಾತ್ ನ ಅಹಮದಾಬಾದ್ ನಲ್ಲಿ ಮೊನ್ನೆ ಮಧ್ಯಾಹ್ನ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 274 ಮಂದಿ ಮೃತಪಟ್ಟಿದ್ದಾರೆ. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಪತನಗೊಂಡಿದೆ. ಇದರಲ್ಲಿ 242 ಪ್ರಯಾಣಿಕದ್ದರು.

ವಿಮಾನ ಟೇಕ್ ಆಫ್ ಆಗುವಾಗಲೇ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಪೈಲಟ್ ಎಟಿಸಿ ಕೇಂದ್ರಕ್ಕೆ ಅಪಾಯವಿದೆ ಎಂದು ಸಾರುವ ಮೇಡೇ ಸಂದೇಶ ಕಳುಹಿಸಿದ್ದ. ಎಟಿಸಿ ಕೇಂದ್ರಕ್ಕೆ ಪೈಲಟ್ ನೀಡಿದ ಸಂದೇಶ ಏನೆಂದು ಈಗ ಬಯಲಾಗಿದೆ. ಆತ ಕೇವಲ ಮೇಡೇ ಎಂದು ಮಾತ್ರ ಹೇಳಿರಲಿಲ್ಲ.

ಜೊತೆಗೆ ತಮಗಿರುವ ಅಪಾಯವನ್ನೂ ವಿವರಿಸಿ ಹೇಳಿದ್ದ. ‘ಮೇಡೇ.. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ. ಟೇಕಾಫ್ ಗೆ ಪ್ರೆಷರ್ ಸಾಕಾಗುತ್ತಿಲ್ಲ. ನಾವು ಅಪಾಯದಲ್ಲಿದ್ದೇವೆ’ ಎಂದು ಪೈಲಟ್ ಹೇಳಿದ್ದರು. ಇದಾದ ಬಳಿಕ ಸಂಪರ್ಕ ಕಡಿತಗೊಂಡಿದೆ. ಎಟಿಸಿ ಕೇಂದ್ರದಿಂದ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments