Publish Date: Fri, 25 Sep 2020 (10:49 IST)
Updated Date: Fri, 25 Sep 2020 (11:56 IST)
ಚಂಡಿಗಢ್ : ವ್ಯಕ್ತಿಯೊಬ್ಬ ತನ್ನ ಹೆಂಡತಿ ಜೊತೆಗೆ ಅತ್ತಿಗೆ, ಅತ್ತೆಯನ್ನು ಕೊಲೆ ಮಾಡಿ ಅವರ ಶವದೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ತಿಳಿದ ವ್ಯಕ್ತಿ ಅದಕ್ಕೆ ಆಕೆಯ ಸಹೋದರಿ ಹಾಗೂ ತಾಯಿಯ ಬೆಂಬಲವಿದೆ ಎಂದು ಅವರನ್ನು ಕೊಲೆ ಮಾಡಿದ್ದಾನೆ. ಹಾಗೇ ಅವರ ಶವದೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾನೆ. ಮೂರು ಶವಗಳು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ನೂರ್ ಹಸನ್(27) ಎಂಬುದಾಗಿ ತಿಳಿದುಬಂದಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ ಶವಗಳೊಂದಿಗೆ ಸೆಕ್ಸ್ ಮಾಡಿರುವ ಸತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.