Select Your Language

Notifications

webdunia
webdunia
webdunia
webdunia

ತಲೆಗೆ ಬಂದೂಕಿಡುವ ಸರ್ಕಾರ ಜನರಿಗೆ ಬೇಡ: ಮಹಾಘಟಬಂಧನ ವಿರುದ್ಧ ಮೋದಿ ವಾಗ್ದಾಳಿ

PM Narendra Modi

Sampriya

ಸೀತಾಮರ್ಹಿ , ಶನಿವಾರ, 8 ನವೆಂಬರ್ 2025 (17:56 IST)
Photo Credit X
ಸೀತಾಮರ್ಹಿ: ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್‌ ಸರ್ಕಾರ ನಡೆಸಲು ಜನರು ಮತ ನೀಡುವುದಿಲ್ಲ. ಯಾಕೆಂದರೆ ಇವರು ಅಧಿಕಾರಕ್ಕೆ ಬಂದಲ್ಲಿ  ಜನರ ತಲೆಗೆ ‘ಕಟ್ಟಾ’ (ದೇಸಿ ಬಂದೂಕು) ಇಟ್ಟು, ಕೈ ಎತ್ತಲು ಹೇಳುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ನಡೆಯುತ್ತಿರುವ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. 

ಎನ್‌ಡಿಎ ಸರ್ಕಾರದಲ್ಲಿ ಸ್ಟಾರ್ಟ್‌ಅಪ್‌ ಉದ್ಯಮಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದ್ದು, ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಮತ್ತೊಂದೆಡೆ ಆರ್‌ಜೆಡಿಯು ಮಕ್ಕಳನ್ನು ‘ರಂಗ್ದಾರ್‌’ (ಬೀದಿ ಗೂಳಿ) ಅನ್ನಾಗಿ ಬೆಳೆಯುವಂತೆ ಕರೆ ನೀಡುತ್ತಿದೆ. ಹೀಗೆ ಬಂದೂಕು ಸಂಸ್ಕೃತಿಯ ಹಾಗೂ ದುರಾಡಳಿತ ನಡೆಸುವ, ಹಿಂಸಾಚಾರದಲ್ಲಿ ತೊಡಗುವ ಭ್ರಷ್ಟರನ್ನು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬೇಡಿ ಎಂದರು. 

ಇದೇ ಸಂದರ್ಭದಲ್ಲಿ ಮೋದಿ ಅವರು‘ನಮಗೆ ಇಂಥ ‘ಕಟ್ಟಾ ಸರ್ಕಾರ್’ ಬೇಡ. ನಮಗೆ ಮತ್ತೆ ಎನ್‌ಡಿಎ ಸರ್ಕಾರ ಬೇಕು’ ಎಂಬ ಘೋಷಣೆಯನ್ನು ಕೂಗಿದರು. 

'ತಲೆಗೆ ಬಂದೂಕು ಇಡುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಶಾಲೆ, ಕಂಪ್ಯೂಟರ್‌, ಕ್ರಿಕೆಟ್‌ ಬ್ಯಾಟ್ ಹಾಗೂ ಹಾಕಿ ಸ್ಟಿಕ್‌ ಹೊಂದಲು ಉತ್ತೇಜಿಸುವ ಎನ್‌ಡಿಎ ಸರ್ಕಾರವನ್ನು ಅಪೇಕ್ಷಿಸುತ್ತಿದ್ದಾರೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನಿನಲ್ಲಿ ಮಾನ್ಯತೆಯಿಲ್ಲದಿದ್ದರೂ ಸಲಿಂಗ ವಿವಾಹವಾದ ರಿಯಾ ನೃತ್ಯಪಟು ಯುವತಿಯರು