Select Your Language

Notifications

webdunia
webdunia
webdunia
webdunia

ಆನ್‍ಲೈನ್ ನಲ್ಲಿ ಜನರಿಗೆ ವಂಚನೆ!

ಆನ್‍ಲೈನ್ ನಲ್ಲಿ ಜನರಿಗೆ ವಂಚನೆ!
ನವದೆಹಲಿ , ಭಾನುವಾರ, 27 ಫೆಬ್ರವರಿ 2022 (09:20 IST)
ಫರಿದಾಬಾದ್ : ಆನ್ಲೈನ್ ನಲ್ಲಿ 100ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪದ ಮೇಲೆ ಫರಿದಾಬಾದ್ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ.

ವರದಿಯ ಪ್ರಕಾರ, ಆರೋಪಿಗಳ ಗ್ಯಾಂಗ್ ಲಾಟರಿ ಮತ್ತು ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ಗ್ರಾಹಕರಿಗೆ ಬಹುಮಾನಗಳನ್ನು ನೀಡುತ್ತೇವೆ ಎಂದು ಆಸೆಯನ್ನು ಹುಟ್ಟಿಸುತ್ತಾರೆ. ಈ ಹಿನ್ನೆಲೆ ಗ್ರಾಹಕರು ಸಹ ಅವರು ಹೇಳಿದಕ್ಕೆ ಮರುಳಾಗಿ ಆರೋಪಿಗಳು ಕೇಳಿದ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ.

ಅಲ್ಲದೆ ನಿಮಗೆ ಬಹುಮಾನ ಸಿಗಬೇಕಾದರೆ ಜಿಎಸ್ಟಿ ಹಣ ಕಟ್ಟಬೇಕು ಎಂದು ಕೇಳುತ್ತಾರೆ. ಅದರಂತೆ ಗ್ರಾಹಕರು ಸಹ ಹಣವನ್ನು ಕಟ್ಟುತ್ತಿದ್ದಂತೆ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿಕೊಳ್ಳುತ್ತಾರೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ಬಂಧಿತ ಆರೋಪಿಗಳನ್ನು ಫರಿದಾಬಾದ್ನ ದೀಪಕ್ ಝಾ, ದೆಹಲಿಯ ದೀಕ್ಷಾ, ಉತ್ತರ ಪ್ರದೇಶದ ಸುಹೇಲ್ ಮತ್ತು ದೆಹಲಿಯ ದೀಪಕ್ ಸಿಂಗ್ ಎಂದು ನಗರ ಪೊಲೀಸರು ಗುರುತಿಸಿದ್ದಾರೆ.

ಮೋಸ ಹೋದ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದು, ಅವರ ಜಾಲವನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ, ಆರೋಪಿಗಳು ತಮ್ಮನ್ನು ಬಚಾವ್ ಮಾಡಿಕೊಳ್ಳಲು ಸ್ಕಾರ್ಪಿಯೋ ಕಾರನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ.

ಈ ಗ್ಯಾಂಗ್ ಕಾರನ್ನು ‘ವರ್ಚುವಲ್ ಕಾಲ್ ಸೆಂಟರ್’ ಆಗಿ ಬಳಸುತ್ತಿದ್ದು, ಅದರ ನೋಂದಣಿ ಸಂಖ್ಯೆಯನ್ನು ಬದಲಾಯಿಸುತ್ತಲೇ ಇರುತ್ತಾರೆ ಎಂದು ತಿಳಿದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ಪ್ರಯಾಣ ನಿಷೇಧಿಸಿದ ರಷ್ಯಾ!