Select Your Language

Notifications

webdunia
webdunia
webdunia
webdunia

Pehalgam: ಭಾರತೀಯ ಸೇನೆಯ ಆಕ್ರೋಶಕ್ಕೆ ಹೈರಾಣಾದ ಪಹಲ್ಗಾಮ್ ಉಗ್ರ ಆದಿಲ್ ಹುಸೇನ್ ಕುಟುಂಬಸ್ಥರು ಹೇಳಿದ್ದೇನು

Pehalgam

Krishnaveni K

ಜಮ್ಮು ಕಾಶ್ಮೀರ , ಭಾನುವಾರ, 27 ಏಪ್ರಿಲ್ 2025 (11:05 IST)
Photo Credit: X
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಉಗ್ರರಲ್ಲಿ ಓರ್ವನಾದ ಆದಿಲ್ ಹುಸೇನ್ ಥೋಕರ್ ಕೂಡಾ ಒಬ್ಬಾತ. ಇದೀಗ ಭಾರತೀಯ ಸೇನೆಯ ಆಕ್ರೋಶಕ್ಕೆ ಹೈರಾಣಾದ ಉಗ್ರನ ಕುಟುಂಬ ಹೇಳಿರುವುದು ಏನು ನೋಡಿ.

ಪಹಲ್ಗಾಮ್ ನಲ್ಲಿ ದಾಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದ ಉಗ್ರರ ಮನೆಗಳನ್ನು ಸೇನೆ ಈಗ ಸ್ಪೋಟಿಸಿ ಧ್ವಂಸಗೊಳಿಸುತ್ತಿದೆ. ಅದರಂತೆ ಅದಿಲ್ ಹುಸೇನ್ ಮನೆಯನ್ನೂ ಭಾರತೀಯ ಸೇನೆ ಸ್ಪೋಟಕ ಬಳಸಿ ಧ್ವಂಸಗೊಳಿಸಿತ್ತು.

ಇದರಿಂದ ಆತನ ಕುಟುಂಬಸ್ಥರು ಈಗ ನಿರಾಶ್ರಿತರಾಗಿದ್ದಾರೆ. ಸ್ಪೋಟಿಸುವ ಮೊದಲು ಅದಿಲ್ ತಾಯಿ, ಸೇರಿದಂತೆ ಕುಟುಂಬಸ್ಥರು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು. ಆದರೆ ಮನೆ ಮಠ ಕಳೆದುಕೊಂಡು ಈಗ ಕುಟುಂಬ ಬೀದಿಗೆ ಬಿದ್ದಿದೆ.

ಭಾರತೀಯ ಸೇನೆಯ ಆಕ್ರೋಶಕ್ಕೆ ಬೆಚ್ಚಿಬಿದ್ದಿರುವ ಕುಟುಂಬ ‘ಆದಿಲ್ ನಮ್ಮ ಜೊತೆ 2018 ರಿಂದಲೂ ಸಂಪರ್ಕದಲ್ಲಿಲ್ಲ. ಪರೀಕ್ಷೆಗೆಂದು ಮನೆ ಬಿಟ್ಟು ಹೋದವನು ಪತ್ತೆಯಿರಲಿಲ್ಲ, ಫೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದ. ಹೀಗಾಗಿ ನಾವು ನಾಪತ್ತೆಯಾಗಿರುವುದಾಗಿ ಮೂರು ದಿನಗಳ ಬಳಿಕ ದೂರು ಕೂಡಾ ನೀಡಿದ್ದೆವು.

ಒಂದು ವೇಳೆ ಆತ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದು ನಿಜವಾಗಿದ್ದಲ್ಲಿ ಆತನಿಗೆ ಶಿಕ್ಷೆಯಾಗಲಿ. ಆದರೆ ಈಗ ಆತ ಶರಣಾಗಲಿ. ಇದರಿಂದ ನಾವಾದ್ರೂ ಶಾಂತಿಯಿಂದ ಜೀವನ ಮಾಡಬಹುದು’ ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Siddaramaiah: ಯುದ್ಧ ಬೇಡ ಎಂದ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಫುಲ್ ಫೇಮಸ್ Video