Select Your Language

Notifications

webdunia
webdunia
webdunia
webdunia

ಅಪಹರಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಿ ರಿಯಲ್ ಹೀರೋ ಆದ ಪವನ್ ಕಲ್ಯಾಣ್

ಅಪಹರಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಿ ರಿಯಲ್ ಹೀರೋ ಆದ ಪವನ್ ಕಲ್ಯಾಣ್

Sampriya

ಆಂಧ್ರಪ್ರದೇಶ , ಮಂಗಳವಾರ, 2 ಜುಲೈ 2024 (17:02 IST)
Photo Courtesy X
ಆಂಧ್ರಪ್ರದೇಶ: ಕಳೆದ 9 ತಿಂಗಳಿ ಹಿಂದೆ ಅಪಹರಣಕ್ಕೊಳಗಾದ ಯುವತಿಯನ್ನು ಪತ್ತೆಹಚ್ಚಿ ರಕ್ಷಿಸುವ ಮೂಲಕ ಡಿಸಿಎಂ ಪವನ್ ಕಲ್ಯಾಣ್ ಅವರು ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ: ಈಚೆಗೆ  ಇತ್ತೀಚೆಗಷ್ಟೇ ಭೀಮಾವರಂನ ಶಿವಕುಮಾರಿ ಎಂಬ ಮಹಿಳೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪವನ್ ಕಲ್ಯಾಣ್ ಅವರ ಬಳಿ ದೂರು ನೀಡಿದ್ದಾಳೆ.  ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪವನ್ ಕಲ್ಯಾಣ್ ಅವರೇ ಸಿಐ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಫೀಲ್ಡಿಗಿಳಿದ ವಿಜಯವಾಡ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ವಿಜಯವಾಡದ ರಾಮವರಪ್ಪಾಡು ಮೂಲದ ಯುವಕನೊಂದಿಗೆ ಯುವತಿ ಜಮ್ಮುವಿನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದಲ್ಲದೆ, ಇಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರನ್ನೂ ಜಮ್ಮುವಿನಿಂದ ವಿಜಯವಾಡಕ್ಕೆ ಕರೆತರಲಾಗುತ್ತಿದ್ದು, ವಿಶೇಷ ತಂಡ ಅವರನ್ನು ಕರೆತರುತ್ತಿದೆ. ಪವನ್ ಕಲ್ಯಾಣ್ ಆದೇಶದ ಮೇರೆಗೆ ನಗರ ಪೊಲೀಸ್ ಆಯುಕ್ತರು ಯುವತಿ ನಾಪತ್ತೆ ಪ್ರಕರಣದ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ:  ವಿಜಯವಾಡದಲ್ಲಿ ಓದುತ್ತಿದ್ದ ತನ್ನ ಮಗಳನ್ನು ಪ್ರೀತಿಯ ಹೆಸರಲ್ಲಿ ಯುವಕನೊಬ್ಬ ಅಪಹರಿಸಿದ್ದಾನೆಎಂದು ಸಂತ್ರಸ್ತೆ ಶಿವಕುಮಾರಿ ತಮ್ಮ ಅಳಲು ತೋಡಿಕೊಂಡರು. ಮಗಳು ನಾಪತ್ತೆಯಾಗಿ ತಿಂಗಳುಗಟ್ಟಲೇ ಆದರೂ ಆಕೆಯನ್ನು ಪತ್ತೆ ಹಚ್ಚಿಲ್ಲ. ಮಾಚವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಪವನ್‌ಗೆ ದೂರು ನೀಡಿದ್ದಾಳೆ.

ಇನ್ನೂ ಪೊಲೀಸರು ಮಗಳ ಪತ್ತೆಗೆ ಸಹಕರಿಸಿಲ್ಲ ಎಂದು ದೂರಿದ್ದಾಳೆ. ಆಕೆಯ ನೋವನ್ನು ಕಂಡ ಪವನ್ ಕಲ್ಯಾಣ್ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ಎಫ್‌ಐಆರ್ ಪ್ರತಿಯನ್ನು ಶಿವಕುಮಾರಿಯಲ್ಲಿ ಪರಿಶೀಲಿಸಲಾಯಿತು. ಕೂಡಲೇ ಮಾಚವರಂ ಸಿಐಗೆ ಕರೆ ಮಾಡಿ ನಾಪತ್ತೆ ಪ್ರಕರಣದ ವಿವರ ಕೇಳಿದರು. ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಆದೇಶಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ಸಂಬಳ ತಗೋಳ್ತೀನಿ ಎಂದಿದ್ದ ಪವನ್ ಕಲ್ಯಾಣ್ ಈಗ ಬೇಡ ಎನ್ನುತ್ತಿರುವುದೇಕೆ