Publish Date: Wed, 29 Nov 2023 (20:41 IST)
Updated Date: Wed, 29 Nov 2023 (20:58 IST)
ಒಂದು ದಿನದ ಹಿಂದೆ ದಕ್ಷಿಣ ಕೇರಳದ ಪುಯಪ್ಪಳ್ಳಿಯಿಂದ 6 ವರ್ಷದ ಬಾಲಕಿ ಅಬಿಗೇಲ್ ಸಾರಾ ರೆಜಿಯನ್ನು ಅಪಹರಿಸಿದ 21 ಗಂಟೆಗಳ ನಂತರ, ಮಗು ಸಾರ್ವಜನಿಕ ಮೈದಾನದಲ್ಲಿ ಪತ್ತೆಯಾಗಿದ್ದಾಳೆ. ಅಪಹರಣಕಾರರು ಬಾಲಕಿಯನ್ನು ಉಪೇಕ್ಷಿಸಿದ್ದು, ಆಕೆಯನ್ನು ಪೊಲೀಸರು ಸುರಕ್ಷಿತವಾಗಿ ಕರೆ ತಂದಿದ್ದಾರೆ.ಇನ್ನು ಮಗುವನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.