Publish Date: Wed, 29 Nov 2023 (14:00 IST)
Updated Date: Wed, 29 Nov 2023 (14:39 IST)
ಜೈಲಿನಲ್ಲಿದ್ರೂ ರೌಡಿ ಉಮೇಶನ ಬರ್ತಡೆ ಉಮೇಶನ ಪಟಾಲಂ ಆಚರಿಸಿದ್ದಾರೆ.U Boss ಅಂತಾ ಕೇಕ್ ಮಾಡಿಸಿ ಉಮೇಶನ ಸಹಚರರು ಸಂಭ್ರಮಿಸಿದ್ದಾರೆ.ಉಗ್ರಂ ಸಿನಿಮಾದ ಡೈಲಾಗ್ , ಸಾಂಗ್ ಹಾಕಿ ಹವಾ ಕ್ರಿಯೆಟ್ ಮಾಡಿದ್ದಾರೆ.
ಉಗ್ರಂ ವೀರಂ ಸಾಂಗ್ ಹಾಕಿ ಫುಲ್ ಹವಾ ಕ್ರಿಯೆಟ್ ಮಾಡಿದ್ದಾರೆ.ಪೀಣ್ಯದ ಉಮೇಶನ ಏರಿಯಾದಲ್ಲಿ ಅಕ್ಟೋಬರ್ ನಲ್ಲಿ ಬರ್ತಡೆ ಸೆಲೆಬ್ರೆಷನ್ ನಡೆದಿದೆ.ರೌಡಿ ಆನಂದನ ಕೊಲೆ ಕೇಸಲ್ಲಿ ರೌಡಿ ಉಮೇಶ ಜೈಲಿನಲ್ಲಿದ್ದು,ಅಲ್ಲಿಯೇ ಬರ್ತಡೆ ಆಚರಿಸಿಕೊಂಡಿದ್ದ.ಬ್ಯಾರಕ್ ನಲ್ಲಿ ಬರ್ತಡೆ ಆಚರಿಸಿಕೊಂಡು ಹಾರ ಹಾಕಿಕೊಂಡು ಅಸಾಮಿ ಪೋಸ್ ಕೊಟ್ಟಿದ್ದ .ಸಿಸಿಬಿ ತನಿಖೆಯಲ್ಲಿ ಜೈಲಿನಲ್ಲಿನ ಬರ್ತಡೆ ವಿಚಾರ ಬಯಲಾಗಿದೆ.ಇತ್ತ ಏರಿಯಾದಲ್ಲೂ ರೌಡಿ ಸಹಚರರಿಂದ ಸೆಲೆಬ್ರೆಷನ್ ನಡೆದಿದೆ.ಏರಿಯಾದಲ್ಲಿ ಕೇಕ್ ಕಟ್ ಮಾಡಿಸಿ ಹವಾ ಕ್ರಿಯೇಟ್ ಮಾಡಲಾಗಿದೆ.