Select Your Language

Notifications

webdunia
webdunia
webdunia
webdunia

ಬಾರ್ ನಲ್ಲಿ ಲಾಂಗ್ ಬೀಸಿ ಹಲ್ಲೆ ಮಾಡಿದ ಪುಡಿ ರೌಡಿಗಳು

bar
bangalore , ಮಂಗಳವಾರ, 3 ಅಕ್ಟೋಬರ್ 2023 (16:42 IST)
ನಗರದಲ್ಲಿ  ಹವಾ ಮೇಂಟೇನ್ ಮಾಡುವ ಗ್ಯಾಂಗ್ ಹೆಚ್ಚಾಗಿದೆ.ಬಾರ್ ನಲ್ಲಿ ಲಾಂಗ್ ಬೀಸಿ ಹಲ್ಲೆ ನಡೆಸಲಾಗಿದೆ‌.ಇಷ್ಟೆ ಸಾಲದು ಅಂತ ಕಾರಿನಲ್ಲಿ ಕರೆದೊಯ್ದು ಗ್ಯಾಂಗ್  ಹಲ್ಲೆ ಮಾಡಿದೆ.ವೀರು ಎಂಬಾತನ ಸಹಚರರಿಂದ ಕೃತ್ಯ ನಡೆದಿದೆ.ಈ ವೀರು ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ರೌಡಿಶೀಟರ್ ಆಗಿದ್ದು,ಈತ ಕೆಲ ದಿನಗಳ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದಾನೆ.ಇದ್ರಿಂದ ಈತನ ಹುಡುಗರು ಅಟ್ಟಹಾಸ ಮೇರೆಯುತ್ತಿದ್ದಾರೆ.ಗಿರಿ ಮತ್ತು ಚಂದನ್, ವೀರು‌ವಿನ ಸಹಚರರು.ನಮ್ಮಣ್ಣ  ಜೈಲಿನಿಂದ ಬಂದಿದ್ದಾನೆ ಅಂತ ಹವಾ ಮೇಂಟೇನ್ ಮಾಡ್ತಿದ್ದು,ಮೋಹನ್ ಎಂಬಾತನಿಗೆ ಲಾಂಗ್ ನಿಂದ ಹಲ್ಲೆ ನಡೆಸಿದ್ದಾರೆ.ಕಲಾಸಿಪಾಳ್ಯದಲ್ಲಿ ಶಮಂತ್ ಬಾರ್ ನಲ್ಲಿ ಕಿಡಿಗೇಡಿಗಳು ಲಾಂಗ್ ಬೀಸಿದ್ದಾರೆ.ಮೋಹನ್ ಮೇಲೆ ಗಿರಿ ಮತ್ತು ಚಂದನ್ ನಿಂದ ಲಾಂಗ್‌ನಿಂದ ಹಲ್ಲೆ ನಡೆದಿದ್ದು,ಕೇವಲ ಹವಾ ಮೇಂಟೇನ್ ಮಾಡೋದಕ್ಕೆ ಈ ರೀತಿಯಾಗಿ ಹಲ್ಲೆ ನಡೆಸಿದ್ದಾರೆ.ಸದ್ಯ ಮೋಹನ್ ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ನಿನ್ನೆ ಬೆಳಗಿನ ಜಾವ 2 ಘಂಟೆಯ ಸುಮಾರಿಗೆ ಘಟನೆ ನಡೆದಿದೆ.ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.ಆರೋಪಿಗಳಿಗಾಗಿ ಪೊಲೀಸರು ಬಲೆ‌ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡುತ್ತೆವೆ- ಕೆ ಹೆಚ್ ಮುನಿಯಪ್ಪ