Publish Date: Tue, 03 Oct 2023 (15:47 IST)
Updated Date: Tue, 03 Oct 2023 (14:25 IST)
ವೀರಪ್ಪ ಮೋಯ್ಲಿ ಭೇಟಿ ವಿಚಾರವಾಗಿ ಮುನಿಯಪ್ಪ ಪ್ರತಿಕ್ರಿಯಿಸಿದ್ದು,ವೀರಪ್ಪ ಮೋಯ್ಲಿಯವರು ನಮ್ಮ ನಾಯಕರು.ಅವರು ಕಳೆದ ಲೋಕಸಭೆ ಅಭ್ಯರ್ಥಿಯಾಗಿದ್ರು.ಪಕ್ಷ ಸಂಘಟನೆ ನಡೆಸೊದ್ರ ಬಗ್ಗೆ ಚರ್ಚೆಯಾಗಿದೆ.ಬ್ಲಾಕ್ ಕಾಂಗ್ರೆಸ್ ಸೇರಿ ಹಲವು ಮುಖಂಡರು ಇದ್ರು.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಯಾವ ರೀತಿ ಕಾರ್ಯತಂತ್ರಮಾಡಬೇಕು ಎಂಬ ಚರ್ಚೆಯಾಗಿದೆ.ಇನ್ನೂ ದೇವನಹಳ್ಳಿಯಲ್ಲಿ ನಾಳೆ ಕಾರ್ಯಕ್ರಮ ಇದೆ ಎಂದು ಮುನಿಯಪ್ಪ ಹೇಳಿದ್ದಾರೆ
ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್ ಹಂಚಿಕೆ ವಿಚಾರವಾಗಿ ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡುತ್ತೆವೆ.ರಾಜ್ಯದಿಂದ ಹೈಕಮಾಂಡ್ ಸಲಹೆಯನ್ನು ಪಡೆಯುತ್ತಾರೆ.ಹೈಕಮಾಂಡ್ ಟಿಕೆಟ್ ಬಗ್ಗೆ ನಿರ್ಧಾರ ಮಾಡುತ್ತೆ.ಕಾಂಗ್ರೆಸ್ನಲ್ಲಿ ಅಭ್ಯರ್ಥಿಯಾಗೋದಕ್ಕೆ ಕಾಂಗ್ರೆಸ್ ನಲ್ಲಿ ಅಡಚಣೆಯಿಲ್ಲ ಎಂದು ಮುನಿಯಪ್ಪ ಹೇಳಿದ್ದಾರೆ.