Select Your Language

Notifications

webdunia
webdunia
webdunia
webdunia

ಪಕ್ಷ ಮತ್ತು ಚುನಾವಣೆ ನನ್ನ ಮಗಳನ್ನು ಬಲಿ ಪಡೆಯಿತು: ಹಿಮಾನಿ ಕೊಲೆಗೆ ಕಾರಣ ಬಿಬ್ಬಿಟ್ಟ ತಾಯಿ

ಪಕ್ಷ ಮತ್ತು ಚುನಾವಣೆ ನನ್ನ ಮಗಳನ್ನು ಬಲಿ ಪಡೆಯಿತು: ಹಿಮಾನಿ ಕೊಲೆಗೆ ಕಾರಣ ಬಿಬ್ಬಿಟ್ಟ ತಾಯಿ

Sampriya

ಹರಿಯಾಣ , ಭಾನುವಾರ, 2 ಮಾರ್ಚ್ 2025 (17:25 IST)
Photo Courtesy X
ರೋಹ್ಟಕ್ (ಹರಿಯಾಣ): ರೋಹ್ಟಕ್‌ನಲ್ಲಿ ಸೂಟ್‌ಕೇಸ್‌ನಲ್ಲಿ ಹರಿಯಾಣ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆಗೆ ಕೆಲ ಕಾರಣಗಳನ್ನು ಅವರ ತಾಯಿ ಸವಿತಾ ಬಿಟ್ಟಿದ್ದಾರೆ.

ಚುನಾವಣೆ ಮತ್ತು ಪಕ್ಷವು ನನ್ನ ಮಗಳ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

"ಚುನಾವಣೆ ಮತ್ತು ಪಕ್ಷವು ನನ್ನ ಮಗಳ ಜೀವವನ್ನು ತೆಗೆದುಕೊಂಡಿತು. ಇದರಿಂದಾಗಿ ಅವಳು ಕೆಲವು ಶತ್ರುಗಳನ್ನು ಮಾಡಿಕೊಂಡಳು. ಇವರು (ಅಪರಾಧಿಗಳು) ಪಕ್ಷದವರಿರಬಹುದು, ಅವಳ ಸ್ನೇಹಿತರಾಗಿರಬಹುದು. ಫೆಬ್ರವರಿ 28 ರಂದು ಅವಳು ಮನೆಯಲ್ಲಿದ್ದಳು" ಎಂದು ಸವಿತಾ ಹೇಳಿದರು.

ಇನ್ನು ಮೃತ ಮಹಿಳೆಯ ತಾಯಿ, ಮಗಳು ಹಿಮಾನಿ ಅವರ ನಿಲುವು ಪಕ್ಷದಲ್ಲಿ ಏರುತ್ತಿದೆ, ಅವರು ರಾಹುಲ್ ಗಾಂಧಿ ಅವರೊಂದಿಗೆ ಹೋಗುತ್ತಿದ್ದರು, ಅವರು ಹೂಡಾ ಕುಟುಂಬಕ್ಕೆ ಹತ್ತಿರವಾಗಿದ್ದರು, ಇದು ಕೆಲವರಿಗೆ ಅಸೂಯೆ ಹುಟ್ಟಿಸಿತು.

"ನಮಗೆ ಪೊಲೀಸ್ ಠಾಣೆಯಿಂದ (ಘಟನೆಯ ಬಗ್ಗೆ) ಫೋನ್ ಕರೆ ಬಂದಿದೆ. ನನ್ನ ಮಗಳು ಆಶಾ ಹೂಡಾ (ಭೂಪಿಂದರ್ ಸಿಂಗ್ ಹೂಡಾ ಅವರ ಪತ್ನಿ) ಅವರಿಗೆ ತುಂಬಾ ಹತ್ತಿರದಲ್ಲಿದ್ದಳು, ಆಕೆಗೆ ನ್ಯಾಯ ಸಿಗುವವರೆಗೂ ನಾನು ಅವಳ ಅಂತಿಮ ವಿಧಿಗಳನ್ನು ನಡೆಸುವುದಿಲ್ಲ..."

Share this Story:

Follow Webdunia kannada

ಮುಂದಿನ ಸುದ್ದಿ

ರೌಡಿ ಕೊತ್ವಾಲನ ಶಿಷ್ಯ ಡಿಕೆಶಿ ನಡೆದು ಬಂದ ದಾರಿಯೇ ಅಂತಹದ್ದು: ಜೆಡಿಎಸ್‌