Select Your Language

Notifications

webdunia
webdunia
webdunia
webdunia

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

Vice President Jagdeep Dhankar, Supreme Court of India, Constitution of India

Sampriya

ನವದೆಹಲಿ , ಮಂಗಳವಾರ, 22 ಏಪ್ರಿಲ್ 2025 (16:54 IST)
Photo Courtesy X
ನವದೆಹಲಿ: ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಇತ್ತೀಚಿನ ತಮ್ಮ ಹೇಳಿಕೆಗಳ ವಿವಾದದ ನಡುವೆಯೇ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಇಂದು ನ್ಯಾಯಾಂಗದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ಮುಂದುವರಿಸಿದ್ದಾರೆ.  

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ರಾಷ್ಟ್ರಪತಿಗಳು, ರಾಜ್ಯಪಾಲರಿಗೆ ಸರ್ಕಾರ ನೀಡುವ ಮಸೂದೆಗಳ ಅನುಮೋದನೆಗೆ ಅಥವಾ ಆ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ ಗಡುವು ನೀಡಿತ್ತು.
ರಾಷ್ಟ್ರಪತಿಗಳು ತಮ್ಮ ಅನುಮೋದನೆಗಾಗಿ ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಕುರಿತು ನಿರ್ಧರಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮೂರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಿತ್ತು. ಇದಾದ ನಂತರ ಜಗದೀಪ್ ಸುಪ್ರೀಂ ಕೋರ್ಟ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂ ಕೋರ್ಟ್ ಹೊಂದಿಲ್ಲ ಎಂದು ಅವರು ಹೇಳಿದ್ದರು.


ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಸಾಂವಿಧಾನಿಕ ಕಾರ್ಯಕಾರಿಣಿ ಉಚ್ಚರಿಸುವ ಪ್ರತಿಯೊಂದು ಪದವೂ ರಾಷ್ಟ್ರದ ಅತ್ಯುನ್ನತ ಹಿತಾಸಕ್ತಿಯಿಂದ ಪ್ರೇರಿತವಾಗಿದೆ ಎಂದು ಪುನರುಚ್ಚರಿಸಿದ್ದಾರೆ.

ಜನರಿಗಾಗಿ ಮತ್ತು ಸಾಂವಿಧಾನಿಕ ಪದ್ಧತಿಗಳ ಮೂಲಕ ಆಯ್ಕೆಯಾದವರು ಅದನ್ನು ರಕ್ಷಿಸುವ ಮತ್ತು ಅದರ ವಿಷಯ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ ಸುಪ್ರೀಂ ಮಾಸ್ಟರ್ಸ್ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಂವಿಧಾನವು ಅದರ ಸಾರ, ಅದರ ಮೌಲ್ಯ, ಅದರ ಅಮೃತವನ್ನು ಸಂವಿಧಾನದ ಪೀಠಿಕೆಯಲ್ಲಿ ಒಳಗೊಂಡಿದೆ. ನಾವು ಭಾರತದ ಜನರಲ್ಲೇ ಸರ್ವೋಚ್ಚ ಶಕ್ತಿಯಿದೆ. ಯಾರೂ ಭಾರತದ ಜನರಿಗಿಂತ ಮೇಲಲ್ಲ. ಭಾರತದ ಜನರು ಸಂವಿಧಾನದ ಅಡಿಯಲ್ಲಿ ತಮ್ಮ ಅಭಿವ್ಯಕ್ತಿಗಳು, ಅವರ ಆಸೆ, ಅವರ ಇಚ್ಛೆಯನ್ನು ತಮ್ಮ ಸಾರ್ವಜನಿಕ ಪ್ರತಿನಿಧಿಗಳ ಮೂಲಕ ಪ್ರತಿಬಿಂಬಿಸಲು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರು ಚುನಾವಣೆಯ ಸಮಯದಲ್ಲಿ ಈ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ ಎಂದು ಹೇಳಿದ್ದರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್‌ ವಾತಾವರಣ ಹಾಳು ಮಾಡಿದ ವಕೀಲನಿಗೆ ₹5 ಲಕ್ಷ ದಂಡ ವಿಧಿಸಿ ಬುದ್ಧಿ ಕಲಿಸಿದ ಸುಪ್ರೀಂ ಕೋರ್ಟ್‌