ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಹ್ಯಾಕ್ ಮಾಡಿದ ಬಳಿಕ ಡಿಸಿಎಂ ಎಕ್ಸ್ ಪೋಸ್ಟ್‌ನಲ್ಲಿ ಪಾಕಿಸ್ತಾನ ಹಾಗೂ ಟರ್ಕಿಯ ಭವುಟಗಳನ್ನು ಪೋಸ್ಟ್ ಮಾಡಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಏಷ್ಯಾಕಪ್ ಘರ್ಷಣೆಗೆ ಗಂಟೆಗಳ ಮೊದಲು ಈ ಘಟನೆ ಸಂಭವಿಸಿದೆ.
ಹ್ಯಾಕರ್‌ಗಳು ಎರಡು ದೇಶಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಒಳಗೊಂಡ ದೃಶ್ಯಗಳನ್ನು ಲೈವ್-ಸ್ಟ್ರೀಮ್ ಮಾಡಿದ್ದಾರೆ.
"ನಾವು ತಕ್ಷಣವೇ ಸೈಬರ್ ಕ್ರೈಮ್ ಸೆಲ್ ಅನ್ನು ಎಚ್ಚರಿಸಿದ್ದೇವೆ" ಎಂದು ಶಿಂಧೆ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಮ್ಮ ಸಾಮಾಜಿಕ ಮಾಧ್ಯಮ ತಂಡವು 30 ರಿಂದ 45 ನಿಮಿಷಗಳಲ್ಲಿ ಖಾತೆಯ ನಿಯಂತ್ರಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ."