ನವದೆಹಲಿ: ಮತಗಳ್ಳತನದ ವಿರುದ್ಧ ಸರಣಿ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ನೇಪಾಳದಂತೆ ಇಲ್ಲಿಯೂ ಜೆನ್ ಜಿ ವರ್ಗ ದಂಗೆಯೇಳಲು ಪರೋಕ್ಷವಾಗಿ ಪ್ರೇರೇಪಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ. ರಾಹುಲ್ ಮೂಲ ಉದ್ದೇಶವೇನು ಎಂದು ಪ್ರಶ್ನೆ ಮಾಡಿದೆ.
ನೇಪಾಳದಲ್ಲಿ ಸೋಷಿಯಲ್ ಮೀಡಿಯಾಗಳಿಗೆ ನಿಷೇಧ ಹೇರಿದ್ದ ಸರ್ಕಾರದ ವಿರುದ್ಧ ಜೆನ್ ಜಿ ಕ್ರಾಂತಿ ನಡೆದು ಅರಾಜಕತೆ ಸೃಷ್ಟಿಯಾಗಿತ್ತು. ಪ್ರಧಾನಿ, ಅಧ್ಯಕ್ಷರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಹಿಂಸಾಚಾರ ಭುಗಿಲೆದ್ದು ಕೈಗೆ ಪ್ರಧಾನಿ ನಿವಾಸವನ್ನೇ ಧ್ವಂಸ ಮಾಡಿದ್ದರು. ಕೈ ಗೆ ಸಿಕ್ಕವರ ಮೇಲೆ ಹಲ್ಲೆ, ಕೊಲೆ ನಡೆದಿತ್ತು.
ಇದೀಗ ಮತಗಳ್ಳತನದ ವಿರುದ್ಧ ಸರಣಿ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಜೆನ್ ಜಿ ಇದರ ವಿರುದ್ಧ ಹೋರಾಡಬೇಕು. ನಿಮ್ಮ ಜೊತೆಗೆ ನಾನು ಯಾವತ್ತೂ ಇರುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ನೇಪಾಳದಂತೆ ಇಲ್ಲಿಯೂ ದಂಗೆಯೇಳಲು ಪ್ರೇರೇಪಿಸಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.
ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಹೇಗಾದರೂ ಮಾಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು ಮತ್ತು ಅಧಿಕಾರ ಪಡೆಯುವುದೇ ರಾಹುಲ್ ಗಾಂಧಿ ಉದ್ದೇಶವೆಂಬಂತೆ ಕಾಣುತ್ತಿದೆ. ಆದರೆ ರಾಹುಲ್ ಪ್ರಚೋದನೆಯನ್ನು ಜೆನ್ ಜಿ ಕಿವಿಗೆ ಹಾಕಿಕೊಳ್ಳಲ್ಲ. ಯಾಕೆಂದರೆ ವಂಶ ಆಡಳಿತ ಹೊಂದಿರುವ ಕಾಂಗ್ರೆಸ್ ನ ನಿಜ ಬಣ್ಣವೇನೆಂದು ಈಗಿನ ಯುವ ಜನಾಂಗದವರಿಗೆ ಗೊತ್ತಿದೆ ಎಂದು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.