Webdunia - Bharat's app for daily news and videos

Install App

ಪಬ್​ಜಿ ಪ್ರಿಯರೇ ಎಚ್ಚರ...!

Webdunia
ಸೋಮವಾರ, 22 ನವೆಂಬರ್ 2021 (10:13 IST)
ಇಡೀ ಗೇಮಿಂಗ್ ಲೋಕದಲ್ಲೇ ಪಬ್ಜಿ ಕ್ರಿಯೆಟ್ ಮಾಡಿರೋ ಕ್ರೇಜ್ ಯಾವ ಗೇಮ್ ಮಾಡಿಲ್ಲ. ಮಾಡೋದು ಇಲ್ಲ.
ಯಾರನ್ನು ಕೇಳಿದರು ಪಬ್ಜಿ ಅಂತಾರೆ. ಅಷ್ಟರ ಮಟ್ಟಿಗೆ ಈ ಗೇಮ್ ಎಲ್ಲರನ್ನು ಆವರಿಸಿಕೊಂಡುಬಿಟ್ಟಿದೆ. ಕೆಲ ತಿಂಗಳು ಈ ಪಬ್ಜಿ ಗೇಮ್ ಇಂಡಿಯಾದಲ್ಲಿ ಬ್ಯಾನ್ ಮಾಡಲಾಗಿತ್ತು. ಆದರೆ, ಬ್ಯಾನ್ ತೆಗೆದ ಮೇಲೆ ಮತ್ತೆ ಯುವಜನತೆ ಈ ಪಬ್ಜಿ ಗೇಮ್ನಲ್ಲಿ ಮುಳುಗಿಹೋಗಿದೆ. ಈ ಹಿಂದೆಯೂ ಪಬ್ಜಿ ಗೇಮ್ನಿಂದ ಆದ ಅನಾಹುತ ಒಂದೆರೆಡಲ್ಲ. ಪಬ್ಜಿ ಆಟವಾಡಲು ಮೊಬೈಲ್ ಕೊಡಲಿಲ್ಲ ಅಂತ ತಂದೆಯನ್ನೇ ಕೊಂದ ಕಥೆಯನ್ನು ಕೇಳಿದ್ದೇವೆ. ಪಬ್ಜಿ ಆಡಿ ಹುಚ್ಚಾರಾಗಿ ಆಸ್ಪತ್ರೆ ಸೇರಿರುವುದನ್ನು ನೋಡಿದ್ದೇವೆ. ಈ ಪಬ್ಜಿ ಆಟದೊಳಗೆ ಮುಳುಗಿದರೆ, ಹೊರಗಿನ ಪ್ರಪಂಚದ ಅರಿವೆ ಇರುವುದಿಲ್ಲ. 100 ಜನರಲ್ಲಿ ಕೊನೆಯದಾಗಿ ಉಳಿದು ವಿನ್ನರ್.. ವಿನ್ನರ್..ಚಿಕನ್ ಡಿನ್ನರ್ ಮಾಡುವವರೆಗೂ ಗೇಮ್ನಿಂದ ಆಚೆ ಬರುವುದಿಲ್ಲ. ಇದೀಗ ಪಬ್ಜಿ ಗೇಮ್ನಿಂದ ಮತ್ತೊಂದು ದುರತವೊಂದು ನಡೆದುಹೋಗಿದೆ.  ಹೀಗೆ ಪಬ್ಜಿ ಆಡುತ್ತಾ ವಾಕಿಂಗ್ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ರೈಲು ಹರಿದ ಘಟನೆ ಉತ್ತರ ಪ್ರದೇಶ ಮಥುರಾದಲ್ಲಿ ನಡೆದಿದೆ.
10ನೇ ತರಗತಿ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಹಾಗೂ 16 ವರ್ಷ ರಾಹುಲ್ ಇಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ಪಬ್ಜಿ ಆಟದಲ್ಲಿ ಮುಳುಗಿದ್ದಾರೆ. ವಾಕಿಂಗ್ ದಾರಿ ತಪ್ಪಿದೆ. ಗಮನ ಪಬ್ಜಿ ಮೇಲೆ ಹೆಚ್ಚಾಗಿತ್ತು. ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಮೇಲೆ ರೈಲು ಹರಿದು ಸ್ಥಳದಲ್ಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನಿನ್ನೆ ಭಾನುವಾರ ಶಾಲೆಗೆ ರಜೆ  ಇದ್ದ ಕಾರಣ ಬೆಳಗ್ಗೆಯಿಂದಲೇ ಆಟ ಆಡಲು ಶುರು ಮಾಡಿಕೊಂಡಿದ್ದರೆ.  ವಾಕಿಂಗ್ ವೇಳೆ ಪಬ್ಜಿ ಗೇಮ್ ಆಡುತ್ತಾ ಮುಂದೆ ಸಾಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ದಿನವಿಡಿ ಪಬ್ಜಿ ಆಡುತ್ತಿರಲಿಲ್ಲ. ಓದುವುದರಲ್ಲೂ ಮುಂದಿದ್ದರು. ಬಿಡುವು ಸಿಕ್ಕಾಗ ಮಾತ್ರ ಪಬ್ಜಿ ಆಡುತ್ತಿದ್ದರಂತೆ. ಆದರೆ  ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆದ ಪೊಲೀಸರು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕಾಂಗ್ರೆಸ್ ಅವಧಿಯಲ್ಲಿ ಮಿತಿಮೀರಿದೆ ಕಮಿಷನ್: ನಮ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ್ರಿ ಆರ್ ಅಶೋಕ್ ಆಕ್ರೋಶ

ಗಣೇಶನ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಕೂರಿಸಬೇಕು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments