Select Your Language

Notifications

webdunia
webdunia
webdunia
Wednesday, 16 April 2025
webdunia

ಕ್ರಿಕೆಟ್ ಬಾಲ್ ಎತ್ತಲು ಹೋಗಿ ದುರಂತ!

ಆನೇಕಲ್
ಬೆಂಗಳೂರು , ಭಾನುವಾರ, 7 ನವೆಂಬರ್ 2021 (08:34 IST)
ಆನೇಕಲ್ : ಕ್ರಿಕೆಟ್ ಆಟವಾಡುತ್ತಿದ್ದಾಗ ಬಾಲ್ ಅನ್ನು ಎತ್ತಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸೇರಿ ಒಟ್ಟು ಮೂವರು ಸಾವನ್ನಪ್ಪಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ.
ಆನೇಕಲ್ನ ಇಗ್ಗಲೂರು ಗ್ರಾಮದ ಬಳಿ ಕೃಷಿ ಹೊಂಡಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಗ್ಗಲೂರು ಬಳಿ ಈ ಘಟನೆ ನಡೆದಿದೆ.
ಕೃಷಿ ಹೊಂಡಕ್ಕೆ ಬಿದ್ದ ಬಾಲ್ ತರಲು ಹೋಗಿ ಈ ದುರ್ಘಟನೆ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋಗಿ ಮೂವರು ಸಾವನ್ನಪ್ಪಿದ್ದಾರೆ. ಧೀಮಂತ ( 13), ಹೃಷಿಕೇಶ್ (9), ಅಮಿತ್ ಕುಮಾರ್ (31) ಮೃತಪಟ್ಟವರಾಗಿದ್ದಾರೆ. ಮಜುಮ್ದಾರ್ ಆಸ್ಪತ್ರೆಗೆ ಮೂವರ ಮೃತದೇಹಗಳನ್ನು ಸ್ಥಳಾಂತರ ಮಾಡಲಾಗಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಕ್ರಿಕೆಟ್ ಬಾಲ್ ತರಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ಸಾವನಪ್ಪಿದ ಇಬ್ಬರು ಬಾಲಕರು, ಓರ್ವ ಯುವಕನ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಶಾಲೆಗೆ ರಜೆಯಿದ್ದ ಕಾರಣದಿಂದ ಕ್ರಿಕೆಟ್ ಆಡುತ್ತಿದ್ದ ಬಾಲಕರು ಕೃಷಿ ಹೊಂಡಕ್ಕೆ ಬಿದ್ದಿದ್ದ ಬಾಲ್ ಅನ್ನು ತೆಗೆಯಲು ಹೋದಾಗ ಈ ಘಟನೆ ನಡೆದಿದೆ. ಒಬ್ಬನನ್ನು ಬಚಾವ್ ಮಾಡಲು ಹೋಗಿ ಮೂರು ಜನರ ಸಾವನ್ನಪ್ಪಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ 3 ದಿನ ವರುಣನ ಆರ್ಭಟ!