ಇಂದು ಮತ್ತು ನಾಳೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.
ಪವರ್ ಕಟ್ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ. ಮಳೆ ನುಡವೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯನಗರ, ಹೊಸಹಳ್ಳಿ, ಹಂಪಿನಗರ, ರೆಮ್ಕೊ ಲೇಔಟ್, ಕಯಾನ್ ಲೇಔಟ್, ಸೆಂಟ್ರಲ್ ಎಕ್ಸೈಸ್ ಲೇಔಟ್, ಎಂಸಿ ಲೇಔಟ್, ಸಿಇಎಸ್ ಲೇಔಟ್, ಬಾಪೂಜಿ ಲೇಔಟ್, ಜಿಕೆಡಬ್ಲ್ಯೂ ಲೇಔಟ್, ಸೆಕ್ರೆಟರಿಯೇಟ್ ಲೇಔಟ್, ಮಾರೇನಹಳ್ಳಿ, ವಿಡಿಯಾ ಲೇಔಟ್, ಅತ್ತಿಗ್ಗೆಯಲ್ಲಿ ವಿದ್ಯುತ್ ಕಡಿತವಾಗಲಿದೆ. , ಬಸವೇಶ್ವರ ಲೇಔಟ್, ಸುಬ್ಬಣ್ಣ ಗಾರ್ಡನ್, ಬಿಎಚ್ಇಎಲ್ ಟೌನ್ಶಿಪ್, ವಿಎಚ್ಬಿಸಿಎಸ್ ಲೇಔಟ್, ಪ್ರಿಯದರ್ಶಿನಿ ಲೇಔಟ್, ವಿನಾಯಕ ಲೇಔಟ್, ಶಿವಾನಂದ್ ನಗರ, ಮೂಡಲಪಾಳ್ಯ, ಚಂದ್ರಾ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಮಾರುತಿ ನಗರ, ನಾಗರಭಾವಿ ಮುಖ್ಯ ರಸ್ತೆ, ಬಿಸಿಸಿ ಲಾಯೌಟ್, ಜಿ.ಸಿ.ಸಿ. ಪ್ರಶಾಂತ ನಗರ,ಸಂಪಿಗೆ ಲೇಔಟ್, ಅಮರಜ್ಯೋತಿ ನಗರ, ಎಚ್ವಿಆರ್ ಲೇಔಟ್, ಮಾನಸ ನಗರ, ಟೀಚರ್ಸ್ ಲೇಔಟ್, ಎನ್ಜಿಇಎಫ್ ಲೇಔಟ್ ಮತ್ತು ಪಂಚಶೀಲ ನಗರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.