ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದಲ್ಲಿ ಮತ್ತೊಂದು ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ನಿನ್ನೆ ಮಣ್ಣು ಕುಸಿತ ಹೆಚ್ಚಾದ ಹಿನ್ನೆಲೆಯಲ್ಲಿ ಹಿಂಭಾಗದ ಮನೆಯಲ್ಲಿ ನಿದ್ರಿಸಲು ತೆರಳಿದ್ದರಿಂದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.
ಬಿಬಿಎಂಪಿ ನಡೆಸಿರುವ ಶಿಥಿಲ ಕಟ್ಟಡಗಳ ವರದಿಯಲ್ಲೂ ಈ ಮನೆಯನ್ನು ಶಿಥಿಲಾವಸ್ಥೆ ಮನೆ ಎಂದು ಗುರುತಿಸಲಾಗಿತ್ತು. ಕಟ್ಟಡ ಕುಸಿದ ಪರಿಣಾಮ ಮನೆ ಪಕ್ಕ ನಿಲ್ಲಿಸಿದ್ದ ಮೂರು ಬೈಕ್‍ಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಕುಸಿದು ಬಿದ್ದಿರುವ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಕ್ಕಪಕ್ಕದ ಎರಡು ಮನೆಗಳು ಶಿಥಿಲಗೊಂಡಿರುವುದನ್ನು ಮನಗಂಡ ಆಯುಕ್ತರು ಆ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು