Select Your Language

Notifications

webdunia
webdunia
webdunia
webdunia

ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುತ್ತಾರೆ : ಓವೈಸಿ

ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುತ್ತಾರೆ : ಓವೈಸಿ
ನವದೆಹಲಿ , ಶನಿವಾರ, 15 ಅಕ್ಟೋಬರ್ 2022 (08:57 IST)
ನವದೆಹಲಿ : ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಹಿಜಬ್ ಧರಿಸುತ್ತಾರೆ.

ಬಿಜೆಪಿ ಹಿಜಬ್ ಧರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಭವಿಷ್ಯದಲ್ಲಿ ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ದೇಶದ ಪ್ರಧಾನಿ ಆಗಬಹುದು ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭವಿಷ್ಯ ನುಡಿದಿದ್ದಾರೆ.

ಹಿಜಬ್ ಕುರಿತಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತಾಗಿ ಮಾತನಾಡಿದ ಅವರು, ಹಿಜಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದೆ.

ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಹಿಜಬ್ ತೆಗೆಯಲು ಬಿಜೆಪಿ ಯತ್ನಿಸುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸಲು ಆಸಕ್ತಿ ವಹಿಸಿದ್ದಾರೆ. ಹಿಜಬ್ ಧರಿಸುವಂತೆ ಯಾರೂ ಅವರನ್ನು ಬಲವಂತಪಡಿಸಿಲ್ಲ. ಅವರ ಸ್ವಇಚ್ಚೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಕೊಲೆಯ ಆಘಾತದಲ್ಲಿ ತಂದೆಯೂ ಹೃದಯಾಘಾತದಿಂದ ಸಾವು