Daily Horoscope

Select Your Language

Notifications

webdunia
webdunia
webdunia
webdunia

ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ನಲ್ಲಿ ವಿಪಕ್ಷಗಳಿಂದ ಭಾರೀ ಎಡವಟ್ಟು: ಟ್ರೋಲ್

Om Birla
ನವದೆಹಲಿ: ಸ್ಪೀಕರ್ ಓಮ್ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ವಿಪಕ್ಷಗಳು ನೀಡಿದ ನೋಟಿಸ್ ನಲ್ಲಿ ಭಾರಿ ಪ್ರಮಾದವಾಗಿದೆ. ಇದೀಗ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಒಳಗಾಗಿದೆ. 
 
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕೊಡದೆ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಈ ಬಗ್ಗೆ ಅವರ ಮೇಲೆ ವಿಶ್ವಾಸ ಇಲ್ಲ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ನಿರ್ಧರಿಸಿ ನೋಟಿಸ್ ನೀಡಿತ್ತು. 
 
ಆದರೆ ಈ ನೋಟಿಸ್ ನಲ್ಲಿ ದೊಡ್ಡ ಪ್ರಮಾದವೊಂದು ನಡೆದಿದ್ದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ನೋಟಿಸ್ ನಲ್ಲಿ ಫೆಬ್ರವರಿ ತಿಂಗಳ ಜೊತೆಗೆ ವರ್ಷವನ್ನು 2026 ಎಂದು ದಾಖಲಿಸುವ ಬದಲು 2025 ಎಂದು ನಮೂದಿಸಲಾಗಿದೆ. ನೋಟಿಸ್ ನ ಎಲ್ಲಾ ಪುಟಗಳಲ್ಲೂ ಇದೇ ರೀತಿ ಬರೆಯಲಾಗಿದೆ. 
 
ಈ ವಿಚಾರಕ್ಕೆ ಸಾರ್ವಜನಿಕರು ಈಗ ಟೀಕೆ ಮಾಡಿದ್ದಾರೆ. ನೋಟಿಸ್ ನಲ್ಲಿ ವರ್ಷವನ್ನೇ ಸರಿಯಾಗಿ ಬರೆದಿಲ್ಲ, ಇವರೆಂಥ ಸಂಸದರು ಎಂದು ಪ್ರಶ್ನೆ ಮಾಡಿದ್ದಾರೆ.
#LokSabha pic.twitter.com/E6YZjl5i82

 

— All India Radio News (@airnewsalerts) February 10, 2026

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಸ್ಯಾಂಡಲ್ ಸೋಪ್‌ಗೆ 2ವರ್ಷ ತಮನ್ನಾ ಬ್ರಾಂಡ್ ಅಂಬಾಸಿಡರ್‌